ನವದೆಹಲಿ: ಜೂನ್ 21ರಂದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವ ಸಜ್ಜಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ನಲ್ಲಿ 3ಡಿ ಯೋಗ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಶಾಂತಿ ಮತ್ತು ಧನಾತ್ಮಕತೆಯನ್ನು ತರುವ ‘ನಾಡಿ ಶೋಧನಾ ಪ್ರಾಣಾಯಾಮ’ (ಅನುಲೋಮ ವಿಲೋಮ)ದ ವೀಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
‘ಈ ಯೋಗಾಸನವನ್ನು ನಿಮ್ಮ ಜೀವನದ ಭಾಗವನ್ನಾಗಿಸಿಕೊಳ್ಳಿ. ಇದನ್ನು ನಿತ್ಯ ಪಾಲನೆ ಮಾಡುವುದರಿಂದ ಜೀವನದಲ್ಲಿ ಧನಾತ್ಮಕತೆ, ಶಾಂತಿ ಸೃಷ್ಟಿಯಾಗುತ್ತದೆ’ ಎಂದಿದ್ದಾರೆ.
3 ನಿಮಿಷಗಳ ವೀಡಿಯೋ ಇದಾಗಿದ್ದು, ಪ್ರಾಣಾಯಾಮ ಮಾಡುವ ವಿಧಾನಗಳನ್ನು ವಿವರಿಸುತ್ತದೆ.
ಅನುಲೋಮ-ವಿಲೋಮಗಳು ದೇಹದ ಶುದ್ಧೀಕರಣ, ಕೆಮ್ಮು ತಡೆಗಟ್ಟುವಿಕೆಗೆ ಸಹಕಾರಿಯಾಗಿದೆ ಎಂದು ರೇಖಾಚಿತ್ರ ಮೂಲಕ ವೀಡಿಯೋದಲ್ಲಿ ವಿವರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.