ಪ್ಯಾರೀಸ್: ವಿಜ್ಞಾನದಲ್ಲಿ ಮಹಿಳೆಯರು ವೃತ್ತಿಯನ್ನು ಆಯ್ದುಕೊಳ್ಳಲು ಉತ್ತೇಜನ ನೀಡುವ ಕಾರ್ಯಕ್ರಮಕ್ಕೆ ಭಾರತೀಯ ಮೂಲದ ಯುವತಿಯೊಬ್ಬಳನ್ನು ಫ್ರಾನ್ಸ್ ರಾಯಭಾರಿಯಾಗಿ ನೇಮಕಗೊಳಿಸಿದೆ.
ಅಸ್ಸಾಂನ ಪ್ರಿಯಾಂಕ ದಾಸ್ ರಾಯಭಾರಿಯಾಗಿ ಆಯ್ಕೆಗೊಂಡಿದ್ದು, ಇವರು ಪ್ಯಾರೀಸ್ನಲ್ಲಿನ ರಫೆಲ್ ಫೈಟರ್ ಜೆಟ್ನ ಸೆಟ್ಲೈಟ್ ನೇವಿಗೇಶನ್ ವಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಮೈಕ್ರೋ ಸೆಟ್ಲೈಟ್ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ಫ್ರಾನ್ಸ್ನಲ್ಲಿ ದಾಸ್ ಅವರು ಶಾಲಾ ಮತ್ತು ಹೈಸ್ಕೂಲ್ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಅವರಿಗೆ ವಿಜ್ಞಾನದಲ್ಲಿ ಮಹಿಳೆಯ ಅವಶ್ಯಕತೆಯನ್ನು ವಿವರಿಸಲಿದ್ದಾರೆ. ವಿಜ್ಞಾನಿಗಳು, ವಿಜ್ಞಾನದಲ್ಲಿ ಮಹಿಳೆ ಮುಂತಾದ ಸೂಕ್ಷ್ಮ ವಿಷಯಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.