×
Home About Us Advertise With s Contact Us

ಅಯೋಧ್ಯಾದ ವಿವಾದಾತ್ಮಕ ಜಾಗವನ್ನು ರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿಸಲು PIL

ನವದೆಹಲಿ: ಅಯೋಧ್ಯಾದಲ್ಲಿನ ವಿವಾದಿತ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರದೇಶವನ್ನು ರಾಷ್ಟ್ರೀಯ ಪಾರಂಪರಿಕ ಸ್ಥಳವನ್ನಾಗಿ ಘೋಷಣೆ ಮಾಡುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ವಿಷಯದ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾ.ಸಿ.ಹರಿ ಶಂಕರ್ ಅವರನ್ನೊಳಗೊಂಡ ನ್ಯಾಯಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಯಾವುದೇ ನೋಟಿಸ್ ಜಾರಿಗೊಳಿಸಿಲ್ಲ, ಬದಲಾಗಿ ಅರ್ಜಿದಾರ ವಕೀಲ ಅನು ಮೆಹ್ತಾ ಅವರಿಗೆ ಕೇಂದ್ರದ ಸಂಸ್ಕೃತಿ ಸಚಿವಾಲಯದ ಮುಂದೆ ಮನವಿ ಮಾಡಲು ತಿಳಿಸಿದ್ದಾರೆ.

ಈ ಮನವಿಯನ್ನು ಪರಿಶೀಲಿಸಿ ಕೇಂದ್ರ ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದಿದ್ದಾರೆ.

ಆಯೋಧ್ಯಾದಲ್ಲಿ ಹಲವಾರು ಪ್ರಾಚೀನ ಸ್ಮಾರಕ, ಶಿಲೆಗಳು ಇರುವ ಹಿನ್ನಲೆಯಲ್ಲಿ ಈ ಜಾಗವನ್ನು ಸರ್ಕಾರ ವಶಪಡಿಸಿಕೊಂಡು, ರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ಘೋಷಣೆ ಮಾಡಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

 

Recent News

Pungava 01-10-2018
8 hours ago  
Back To Top
error: Content is protected !!