ಮುಂಬಯಿ: ಎನ್ಎಸ್ಡಿಎಲ್ ಎಕ್ಸಿಕ್ಯೂಟಿವ್ ಸುಧಾ ಬಾಲಕೃಷ್ಣನ್ ಅವರು ಆರ್ಬಿಐನ ಮೊದಲ ಚೀಫ್ ಫಿನಾನ್ಶಿಯಲ್ ಆಫೀಸರ್(ಸಿಎಫ್ಓ) ಆಗಿ ನೇಮಕಗೊಂಡಿದ್ದಾರೆ. ಮೇ.15ರಿಂದಲೇ ಇವರ ಅಧಿಕಾರವಧಿ ಆರಂಭಗೊಂಡಿದೆ.
2016ರ ಸೆಪ್ಟಂಬರ್ನಲ್ಲಿ ಊರ್ಜಿತ್ ಪಟೇಲ್ ಅವರು ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಆರ್ಬಿಐನಲ್ಲಿ ನಡೆದ ಮೊದಲ ದೊಡ್ಡ ಸಾಂಸ್ಥಿಕ ಬದಲಾವಣೆ ಇದಾಗಿದೆ.
ಚಾರ್ಟೆರ್ಡ್ ಅಕೌಂಟೆಂಟ್ ಆಗಿರುವ ಸುಧಾ ಬಾಲಕೃಷ್ಣನ್ ಅವರು ಆರ್ಬಿಐ ಸೇರಿರುವುದಕ್ಕೂ ಮುನ್ನ ನ್ಯಾಷನಲ್ ಸೆಕ್ಯೂರಿಟೀಸ್ ಡಿಪೋಸಿಟರಿ ಲಿಮಿಟೆಡ್ನ ಅಧ್ಯಕ್ಷರಾಗಿದ್ದರು.
ಇವರು ಆರ್ಬಿಐನ 12ನೇ ಕಾರ್ಯನಿರ್ವಾಹಕಿ ಆಗಿರಲಿದ್ದು, 3 ವರ್ಷಗಳ ಅಧಿಕಾರವಧಿ ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.