ನವದೆಹಲಿ: ದೇಶದಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದೆ. ಆದರೂ ದರ ಕಡಿತಗೊಳಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.
ಒಂದು ವೇಳೆ ಪೆಟ್ರೋಲ್ ಮತ್ತು ಡಿಸೇಲ್ಗಳಿಗೆ ಸಬ್ಸಿಡಿ ನೀಡಲು ಆರಂಭಿಸಿದರೆ ಸರ್ಕಾರ ಅನುಷ್ಠಾನಗೊಳಿಸಲು ಯೋಜಿಸಿರುವ ಜನ ಕಲ್ಯಾಣ ಯೋಜನೆಗಳಿಗೆ ತೊಡಕುಂಟಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
‘ಪೆಟ್ರೋಲ್ ದರ ಏರಿಕೆ ನಿರ್ಲಕ್ಷ್ಯಪಡಿಸಲಾಗದ ಆರ್ಥಿಕ ಸ್ಥಿತಿಯಾಗಿದೆ. ಜಾಗತಿಕ ಆರ್ಥಿಕತೆಗೆ ಇದು ನೇರವಾಗಿ ಸಂಬಂಧಿಸಿದೆ. ಪೆಟ್ರೋಲ್, ಡಿಸೇಲ್ನ ದರ ಕಡಿಮೆಗೊಳಿಸಬೇಕು ಅಂದರೆ, ಸರ್ಕಾರ ಅದನ್ನು ಹೆಚ್ಚಿನ ದರಕ್ಕೆ ಖರೀದಿ ಮಾಡಿ ಕಡಿಮೆ ಬೆಲೆಗೆ ನೀಡಬೇಕು, ಅಂದರೆ ಸಬ್ಸಿಡಿಗೊಳಿಸಬೇಕು. ಆದರೆ ಇದರಿಂದ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ತೊಡಕು ಉಂಟಾಗುತ್ತದೆ’ ಎಂದಿದ್ದಾರೆ.
‘ತೈಲ ಬೆಲೆಯನ್ನು ಸಬ್ಸಿಡಿಗೊಳಿಸಿದರೆ ಸರ್ಕಾರದ ಎಲ್ಲಾ ಜನಪರ ಯೋಜನೆಗಳು ಕಣ್ಮರೆಯಾಗುತ್ತದೆ, ನಮ್ಮ ಬಳಿ ಹಣದ ಮಿತಿಯಿದೆ, ಬೆಲೆ ತಗ್ಗಿಸಿದರೆ ಎಲ್ಲವೂ ತೊಂದರೆಗೀಡಾಗುತ್ತದೆ’ ಎಂದಿದ್ದಾರೆ.
ಮುಂಬುರುವ ದಿನಗಳಲ್ಲಿ ತೈಲ ಬೆಲೆ ರೂ.100 ಗಡಿ ದಾಟಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಪ್ರತಿಪಕ್ಷಗಳು ಇದನ್ನೇ ಗುರಿಯಾಗಿಟ್ಟುಕೊಂಡು ದೇಶವ್ಯಾಪಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.