ನವದೆಹಲಿ: 2016-17ರ ಅವಧಿಯಲ್ಲಿ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ ರೂ.321.03 ಕೋಟಿ ಆಗಿದ್ದು, ಇವುಗಳ ಪೈಕಿ ಸಮಾಜವಾದಿ ಪಕ್ಷ ಅತೀಹೆಚ್ಚು ಅಂದರೆ ರೂ.86.76 ಕೋಟಿ ಆದಾಯ ಗಳಿಸಿದೆ ಎಂದು ಅಸೊಸಿಯೇಶನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.
ಸಮಾಜವಾದಿ ಕೇವಲ ಗಳಿಕೆ ಮಾತ್ರವಲ್ಲದೇ ಖರ್ಚಿನಲ್ಲೂ ಮುಂದಿದ್ದು, ರೂ.147 ಕೋಟಿಗಳನ್ನು ಈ ಸಾಲಿನಲ್ಲಿ ವ್ಯಯ ಮಾಡಿದೆ. 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ವೇಳೆ ಖರ್ಚು ಮಾಡಿದೆ.
ಚುನಾವಣಾ ಆಯೋಗಕ್ಕೆ ಈ ಪಕ್ಷಗಳು ಸಲ್ಲಿಕೆ ಮಾಡಿದ ಆದಾಯ ತೆರಿಗೆ ಪಾವತಿಯ ಆಧಾರದಲ್ಲಿ ಅವುಗಳ ಆದಾಯ ಮತ್ತು ಖರ್ಚಿನ ವರದಿಯನ್ನು ಸಿದ್ಧಪಡಿಸಲಾಗಿದೆ.
2014ರ ನವೆಂಬರ್ನಲ್ಲಿ ಹೊರಡಿಸಿದ ಆದೇಶದಂತೆ ಎಲ್ಲಾ ಮಾನ್ಯತೆ ಪಡೆದ ಪಕ್ಷಗಳು ತಮ್ಮ ಆಡಿಟ್ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡುವುದು ಕಡ್ಡಾಯ. ಆದರೆ 48 ಪಕ್ಷಗಳ ಪೈಕಿ ಕೇವಲ 32 ಪಕ್ಷಗಳು ಮಾತ್ರ ಈ ಆದೇಶವನ್ನು ಪಾಲನೆ ಮಾಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.