ನವದೆಹಲಿ: ವಿಶ್ವದ ಮೂರನೇ ಎರಡು ಭಾಗದಷ್ಟು ಜನ 2050ರ ವೇಳೆಗೆ ನಗರಪ್ರದೇಶದಲ್ಲೇ ಜೀವಿಸಲಿದ್ದಾರೆ, ಭಾರತ, ಚೀನಾ ಮತ್ತು ನೈಜೀರಿಯಾದಲ್ಲಿ ಈ ಏರಿಕೆ ಕೇಂದ್ರೀಕೃತವಾಗಿರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
37 ಮಿಲಿಯನ್ ಜನಸಂಖ್ಯೆ ಹೊಂದಿರುವ ಟೋಕಿಯೋ ನಗರ ಈಗ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯುಳ್ಳ ನಗರ, ಆದರೆ 2028ರ ವೇಳೆಗೆ ದೆಹಲಿ ಇದನ್ನು ಓವರ್ಟೇಕ್ ಮಾಡಿ ವಿಶ್ವದ ಅತೀಹೆಚ್ಚು ಜನಸಂಖ್ಯಾ ನಗರವಾಗಲಿದೆ ಎಂದಿದೆ.
ಇದೇ ವೇಳೆಗೆ ಭಾರತ ಚೀನಾವನ್ನು ಹಿಂದಿಕ್ಕಿ ಅತೀ ಹೆಚ್ಚು ಜನಸಂಖ್ಯೆವುಳ್ಳ ದೇಶವಾಗಿ ಹೊರಹೊಮ್ಮಲಿದೆ.
2050ರ ವೇಳೆಗೆ ಭಾರತ, ಚೀನಾ, ನೈಜೀರಿಯಾಗಳ ನಗರವಾಸಿ ಜನಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.