ನವದೆಹಲಿ: ಮಹಾರಾಷ್ಟ್ರದ ನವಪುರ ನಗರ ಪಂಚಾಯತಿಯಲ್ಲಿ ರೈಲ್ವೇ ನಿಲ್ದಾಣ ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಈ ರೈಲ್ವೇ ನಿಲ್ದಾಣದ ಅರ್ಧ ಭಾಗ ಗುಜರಾತ್ನ ಭೂಪ್ರದೇಶದಲ್ಲಿದೆ.
ಅರ್ಧ ಭಾಗ ಮಹಾರಾಷ್ಟ್ರ, ಇನ್ನರ್ಧ ಭಾಗ ಗುಜರಾತ್ಗೆ ಸೇರಿದ ಈ ರೈಲ್ವೇ ನಿಲ್ದಾಣ ರೈಲ್ವೇ ಸಚಿವ ಟ್ವಿಟ್ ಬಳಿಕ ಜನರ ಕುತೂಹಲದ ಕೇಂದ್ರ ಬಿಂದುವಾಗಿದೆ.
ಪಿಯೂಶ್ ಗೋಯಲ್ ಅವರು, ‘ರಾಜ್ಯಗಳಾಗಿ ಪ್ರತ್ಯೇಕಿಸಲ್ಪಟ್ಟರೂ, ರೈಲ್ವೇ ನಿಲ್ದಾಣದಿಂದ ಒಂದಾಗಿವೆ: ನವಪುರ ರೈಲ್ವೇ ನಿಲ್ದಾಣ ಎರಡು ರಾಜ್ಯಗಳಲ್ಲಿ ಇದೆ, ಅರ್ಧ ಭಾಗ ಮಹಾರಾಷ್ಟ್ರದಲ್ಲಿ, ಅರ್ಧ ಭಾಗ ಗುಜರಾತಿನಲ್ಲಿದೆ. ನವಪುರ ತಾಲೂಕಾಗಿದ್ದು, ಮಹಾರಾಷ್ಟ್ರದ ನಂದುಪುರಕ್ಕೆ ಸೇರಿದೆ’ ಎಂದು ಟ್ವಿಟ್ ಮಾಡಿದ್ದರು.
ಇಂತಹುದೇ ಮತ್ತೊಂದು ರೈಲ್ವೇ ನಿಲ್ದಾಣ ಭಾವನಿ ಮಂಡಿ, ಇದು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.