ನವದೆಹಲಿ: ವಿಶ್ವದ ಅತೀ ಮಾಲಿನ್ಯ ಹೊಂದಿದ 20 ನಗರಗಳ ಪೈಕಿ 14 ನಗರಗಳು ಭಾರತದ್ದೇ ಆಗಿದೆ. ದೆಹಲಿ ಮತ್ತು ವಾರಣಾಸಿಗಳೂ ಇದರಲ್ಲಿ ಸೇರಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.
ವಿಶ್ವದ ಪ್ರತಿ 10 ಜನರಲ್ಲಿ 9 ಜನರು ಮಾಲಿನ್ಯಯುಕ್ತ ಗಾಳಿಯನ್ನು ಸೇವಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತದ ಕಾನ್ಪುರ, ಫರಿದಾಬಾದ್, ಗಯಾ, ಪಾಟ್ನಾ, ಆಗ್ರಾ, ಮುಜಾಫರ್ಪುರ, ಶ್ರೀನಗರ, ಜೈಪುರ, ಪಟಿಯಾಲ, ಜೋಧ್ಪುರ ನಗರಗಳು ಅತೀ ಮಾಲಿನ್ಯ ನಗರಗಳಾಗಿದ್ದು, ಮಾಲಿನ್ಯದ ಮಟ್ಟ ಪಿಎಂ2.5 ಇದೆ.
ಕುವೈಟ್ನ ಅಲಿ ಸುಬಾಹ್ ಅಲ್ ಸಲೇಮ್, ಚೀನಾ ಮತ್ತು ಮಂಗೋಲಿಯಾದ ಕೆಲ ನಗರಗಳು ಮಾಲಿನ್ಯದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.