ಅಹ್ಮದಾಬಾದ್: ಗುಜರಾತಿನಲ್ಲಿರುವ ಪ್ರಸಿದ್ಧ ಸೋಮನಾಥ ದೇಗುಲದೊಳಗೆ ಪ್ರವೇಶ ಬಯಸುವ ಹಿಂದುಯೇತರ ವ್ಯಕ್ತಿಗಳು ಇನ್ನು ಮುಂದೆ ಆಡಳಿತ ಮಂಡಳಿಯ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಸುರಕ್ಷತೆ ಮತ್ತು ಹಿಂದೂ ಭಾವನೆಗಳ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ದೇಗುಲದ ಆಡಳಿತ ಮಂಡಳಿ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಈ ಬಗ್ಗೆ ದೇಗುಲದ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕವನ್ನೂ ಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿಯವರೂ ಈ ದೇಗುಲದ ಟ್ರಸ್ಟಿಗಳಾಗಿದ್ದಾರೆ.
ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಆಡಳಿತ ಮಂಡಳಿ, ಇತರ ಧರ್ಮಿಯರೂ ಕೂಡ ತಮ್ಮ ಧಾರ್ಮಿಕ ಸ್ಥಳಗಳಿಗೂ ಇತರರನ್ನು ಪ್ರವೇಶಿಸಲು ಬಿಡುವುದಿಲ್ಲ. ಮುಸ್ಲಿಂರ ಮೆಕ್ಕಾ, ಪಾರ್ಸಿಗಳ ಅಗ್ಯಾರಿಗೂ ಇತರರ ಪ್ರವೇಶ ನಿರಾಕರಿಸಲಾಗಿದೆ. ತಮ್ಮ ಸ್ಥಳಗಳಿಗೆ ಇತರರನ್ನು ನಿರ್ಬಂಧಿಸುವ ಹಕ್ಕು ಆಯಾ ಧರ್ಮಗಳಿಗಿದೆ ಎಂದಿದೆ.
ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಸೋಮನಾಥ ದೇಗುಲ, ಹಲವಾರು ಬಾರಿ ಇಸ್ಲಾಂ ದಾಳಿಕೋರರ ದಾಳಿಗೆ ಒಳಗಾಗಿದೆ, ಆದರೂ ಇಂದಿಗೂ ಅದು ತನ್ನ ಸದೃಢತೆಯನ್ನು ಕಾಪಾಡಿಕೊಂಡಿದೆ. 1951ರ ಮೇ 11ರಂದು ನವೀಕರಣಗೊಂಡ ಈ ದೇಗುಲವನ್ನು ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಉದ್ಘಾಟನೆಗೊಳಿಸಿದ್ದರು.
ದಕ್ಷಿಣ ಭಾರತದ ತಿರುಪತಿ ಸೇರಿದಂತೆ ಅನೇಕ ದೇಗುಲಗಳಲ್ಲಿ ಇಂತಹ ನಿಯಮ ಈಗಾಗಲೇ ಇದೆ, ಇದೀಗ ಸೋಮನಾಥ ದೇಗುಲದಲ್ಲಿ ಹೊಸದಾಗಿ ಈ ನಿಯಮ ಜಾರಿಗೆ ಬಂದಿರುವುದು ವಿವಾದ ಹುಟ್ಟು ಹಾಕುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.