ಟೋಕಿಯೋ: ಜಪಾನಿನ 112 ವರ್ಷ ಮತ್ತು 259 ದಿನ ವಯಸ್ಸಿನ ಮಸಝೋ ನೊನಕ ಎಂಬುವವರು ಈಗ ಜಗತ್ತಿನ ಅತೀ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆಯ ಅಧಿಕಾರಿಗಳು ಅವರಿಗೆ ಈ ಗೌರವವನ್ನು ಪ್ರದಾನ ಮಾಡಿದ್ದಾರೆ.
ಎಪ್ರಿಲ್ 10ರಂದು ಅಶೋರೊ ಐಸ್ಲ್ಯಾಂಡ್ನಲ್ಲಿರುವ ನೊನಕ ಅವರ ಮನೆಗೆ ತೆರಳಿದ ಗಿನ್ನಿಸ್ ಅಧಿಕಾರಿಗಳು ಅವರಿಗೆ ಖುದ್ದಾಗಿ ಸರ್ಟಿಫಿಕೇಟ್ ಪ್ರದಾನಿಸಿದರು.
ಸ್ಪೇನ್ನ 113 ವರ್ಷದ ಫ್ರಾನ್ಸಿಸ್ಕೋ ನುನೆಝ್ ಒಲಿವೆರಾ ಅವರು ಜನವರಿಯಲ್ಲಿ ತೀರಿಕೊಂಡ ಹಿನ್ನಲೆಯಲ್ಲಿ ನೊನಕ ಅವರಿಗೆ ಈ ಜಗತ್ತಿನ ಹಿರಿಯನ ಪಟ್ಟ ಸಿಕ್ಕಿದೆ.
ನೊನಕ ಅವರು 1905ರ ಜುಲೈ 25ರಂದು ಜನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.