ನವದೆಹಲಿ: ವಿಶೇಷವಾದ ಡೂಡಲ್ ಮೂಲಕ ಚಿಪ್ಕೋ ಚಳುವಳಿಯ 45ನೇ ವರ್ಷವನ್ನು ಗೂಗಲ್ ಆಚರಿಸಿದೆ. ಅರಣ್ಯದ ಸಂರಕ್ಷಣೆಗಾಗಿ ನಡೆದ ಅಹಿಂಸಾತ್ಮಕ ಹೋರಾಟವೇ ಚಿಪ್ಕೋ ಚಳುವಳಿ. 1970ರಲ್ಲಿ ಇದು ಆರಂಭಗೊಂಡಿತು.
ಮರಗಳನ್ನು ಕಡಿಯದಂತೆ ಜನರು ಅವುಗಳನ್ನು ತಬ್ಬಿಕೊಂಡು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಈ ಚಳುವಳಿಗೆ ಚಿಪ್ಕೋ ಎಂಬ ಹೆಸರು ಬಂತು. ಗಾಂಧಿತತ್ವದಡಿ ನಡೆಸಲ್ಪಟ್ಟ ಅಹಿಂಸಾತ್ಮಕ ಹೋರಾಟ ಇದಾಗಿದೆ.
ಕ್ರೀಡಾ ಕಂಪನಿಯೊಂದಕ್ಕೆ ಜಾಗ ನೀಡಲು ಸರ್ಕಾರ ಅರಣ್ಯವನ್ನು ಕಡಿಯಲು ಮುಂದಾದಾಗ ಉತ್ತರಪ್ರದೇಶದ ಮಂಡಲ್ ಗ್ರಾಮದ ಜನರು ಮರಗಳನ್ನು ತಬ್ಬಿಕೊಂಡು ಪ್ರತಿಭಟನೆ ನಡೆಸಿದರು. ಅದರತ್ತ ಸುತ್ತ ಮಾನವ ಸರಪಳಿ ನಿರ್ಮಿಸಿದರು.
ಇದರಿಂದ ಪ್ರೇರಿತಗೊಂಡು ದೇಶದ ಇತರ ಭಾಗದಲ್ಲೂ ಇಂತಹ ಚಳುವಳಿಗಳು ನಡೆಯಲಾರಂಭವಾದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.