ಕೋಲ್ಕತ್ತಾ: ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕೆ ಅಥವಾ ಬೇಡವೇ ಎಂಬ ಅಸಂಬದ್ಧ ಚರ್ಚೆಯೊಂದು ನಮ್ಮ ದೇಶದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಗ್ರಾಮವೊಂದರ ಜನರು ತಮ್ಮೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ದಿನದ 52 ಸೆಕೆಂಡುಗಳ ಕಾಲ ರಾಷ್ಟ್ರಗೀತೆಗಾಗಿ ಎದ್ದು ನಿಲ್ಲುತ್ತಾರೆ.
ಅಭಯ್ನಗರ್ ಎಂಬ ಪ್ರಾಥಮಿಕ ಶಾಲೆಯಲ್ಲಿ ಹಾಡಲಾಗುವ ರಾಷ್ಟ್ರಗೀತೆ ಲೌಡ್ಸ್ಪೀಕರ್ ಮೂಲಕ ಇಡೀ ಗ್ರಾಮಕ್ಕೆ ಪಸರುತ್ತದೆ. ಈ ವೇಳೆ ಅಲ್ಲಿನ ಜನ ಎದ್ದು ನಿಂತು ಗೌರವ ಸೂಚಿಸುತ್ತಾರೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿ.
ಬೆಳಿಗ್ಗೆ 10.50ರ ಸುಮಾರಿಗೆ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಮಕ್ಕಳು , ಯುವಕರು, ವಯಸ್ಕರು ಹೀಗೆ ಎಲ್ಲರೂ ತಾವು ಮಾಡುವ ಕೆಲಸವನ್ನು ಬಿಟ್ಟು 52 ಸೆಕೆಂಡುಗಳ ಕಾಲ ಎದ್ದು ನಿಲ್ಲುತ್ತಾರೆ. ಈ ಮೂಲಕ ಇಡೀ ದೇಶಕ್ಕೆ ಮಾದರಿ ಎನಿಸಿದ್ದಾರೆ.
ಜನರಲ್ಲಿ, ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಉತ್ತೇಜಿಸಲು ಈ ಹವ್ಯಾಸವನ್ನು ರೂಢಿಸಿಕೊಳ್ಳಲಾಗಿದೆ ಎಂದು ಶಾಲಾ ಮುಖ್ಯೋಪಧ್ಯಾಯ ಶಫಿಕುಲ್ ಇಸ್ಲಾಂ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.