ಅಹ್ಮದಾಬಾದ್: ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಮತ್ತು ಪ್ರಸಿದ್ಧ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅವರು ದೇಶದ ಅತೀದೊಡ್ಡ ‘ಟ್ರೈನ್ ದಿ ಟ್ರೈನರ್’ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದ್ದಾರೆ.
ಗುಜರಾತ್ನ 1500 ದೈಹಿಕ ಶಿಕ್ಷಕರನ್ನು ಅಡ್ವಾನ್ಸ್ಡ್ ಟ್ರೈನಿಂಗ್ಗಾಗಿ ಈ ಕಾರ್ಯಕ್ರಮದಲ್ಲಿ ಒಳಪಡಿಸಲಾಗಿದೆ. ಹೆಸರೇ ಹೇಳುವಂತೆ ತರಬೇರುದಾರರಿಗೆ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ.
ಇಎಲ್ಎಂಎಸ್ ಸ್ಪೋರ್ಟ್ಸ್ ಫೌಂಡೇಶನ್ ಕಲ್ಪನೆಯಂತೆ ಈ ಲಾಭ ರಹಿತ ಕಾರ್ಯಕ್ರಮವನ್ನು ವೀಟಾ, ಜಲಜ್ ದಾನಿ ಪ್ರಚಾರಪಡಿಸುತ್ತಿದ್ದಾರೆ. ಗೋಪಿಚಂದ್, ಒಲಿಂಪಿಕ್ ಬಂಗಾರದ ಪದಕ ವಿಜೇತ ಅಭಿನವ್ ಬಿಂದ್ರಾ ಮೆಂಟರ್ಗಳಾಗಿ ತರಬೇತಿ ನೀಡಲಿದ್ದಾರೆ.
ದೈಹಿಕ ಶೀಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.