ನವದೆಹಲಿ: ಎರಡು ಭಾರತೀಯ ಉತ್ಪಾದಕರ ಸಹಕಾರದೊಂದಿಗೆ ಡಿಆರ್ಡಿಓ(Defence Research and Development Organisation ) ತಯಾರಿಸಿದ 40 ಆರ್ಟಿಲರಿ ಗನ್ಗಳನ್ನು ಖರೀದಿ ಮಾಡಲು ರಕ್ಷಣಾ ಸಚಿವಾಲಯ ಶೀಘ್ರದಲ್ಲೇ ಸೇನಾಪಡೆಗಳಿಗೆ ಅನುಮತಿಯನ್ನು ನೀಡಲಿದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಇದರಿಂದ ಉತ್ತೇಜನ ದೊರಕಲಿದೆ.
ಅಡ್ವಾನ್ಸ್ಡ್ ಟೊವ್ಡ್ ಗನ್ ಸಿಸ್ಟಮ್(ಎಟಿಎಜಿಎಸ್) ಎಂದು ಕರೆಯಲ್ಪಡುವ ಗನ್ಗಳನ್ನು ಕಳೆದ ವಾರ ಸಿಕ್ಕಿಂನಲ್ಲಿ ಚಳಿಗಾಲದ ಪ್ರಯೋಗ ಮಾಡಲಾಗಿದ್ದು ಅತ್ಯುತ್ತಮ ರೀತಿಯಲ್ಲಿ ಪ್ರದರ್ಶನ ನೀಡಿದ್ದವು.
ಸೇನೆ ಇದಕ್ಕೆ ತನ್ನ ಕಡೆಯಿಂದ ಸಮ್ಮತಿಯನ್ನು ನೀಡಿತ್ತು, ಮುಂದಿನ ವರ್ಶನ್ಗಳಲ್ಲಿ ಈ ಗನ್ಗಳಿಗೆ ಸುಧಾರಣೆಗಳನ್ನೂ ತರುವ ಪ್ರಯತ್ನ ನಡೆಯುತ್ತಿದೆ. ಇದೀಗ ಇವುಗಳ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.