ಲಕ್ನೋ: ಗೋಮೂತ್ರವನ್ನು ಬಳಸಿ ಫ್ಲೋರ್ ಕ್ಲೀನರ್ಗಳನ್ನು ಉತ್ಪಾದಿಸುವ ಪ್ರಸ್ತಾಪದ ಬಳಿಕ ಇದೀಗ ಉತ್ತರಪ್ರದೇಶ ಸರ್ಕಾರ ಗೋಮೂತ್ರದಿಂದ ಔಷಧಿಗಳನ್ನು ಉತ್ಪಾದನೆ ಮಾಡಲು ತಯಾರಿ ನಡೆಸುತ್ತಿದೆ.
ಆಯುರ್ವೇದ ಇಲಾಖೆಯು ಗೋಮೂತ್ರವನ್ನು ಬಳಸಿ ಒಟ್ಟು 8 ಔಷಧಿಗಳನ್ನು ತಯಾರು ಮಾಡಿದೆ. ಈ ಔಷಧಗಳು ಲಿವರ್ ಸಂಬಂಧಿ ಕಾಯಿಲೆ, ಗಂಟು ನೋವು, ರೋಗನಿರೋಧಕ ಶಕ್ತಿ ಕುಂಠಿತ ಸಮಸ್ಯೆಗಳಿಗೆ ಅತ್ಯಂತ ಪ್ರಯೋಜನಕಾರಿ ಎನ್ನಲಾಗಿದೆ.
ಲಕ್ನೋ ಮತ್ತು ಫಿಲಿಬಿಟ್ನಲ್ಲಿ ಎರಡು ಫಾರ್ಮಸಿಗಳನ್ನು ಹೊಂದಿರುವ ಆಯುರ್ವೇದ ಇಲಾಖೆ ಇತರ ಖಾಸಗಿ ಘಟಕಗಳೊಂದಿಗೆ ಸೇರಿ ಗೋಮೂತ್ರ ಮತ್ತು ಗೋವಿನ ಹಾಲು ಬಳಸಿ ಆಯುರ್ವೇದ ಔಷಧಿಗಳನ್ನು ಸಿದ್ಧಪಡಿಸುತ್ತಿದೆ.
ಉತ್ತರಪ್ರದೇಶದಲ್ಲಿ ಒಟ್ಟು ೮ ಆಯುರ್ವೇದ ಕಾಲೇಜುಗಳಿವೆ, ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬಂದು ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.