ನವದೆಹಲಿ: ಹೊಸವರ್ಷ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ (IIFT) ವಿದ್ಯಾರ್ಥಿಗಳಿಗೆ ನಿಜಕ್ಕೂ ಬಂಪರ್ ಕೊಡುಗೆಯನ್ನೇ ನೀಡಿದೆ. ಇಲ್ಲಿ 4 ವಿದ್ಯಾರ್ಥಿಗಳು ವಾರ್ಷಿಕ ರೂ.95 ಲಕ್ಷ ಪ್ಯಾಕೇಜ್ ಆಫರ್ ಪಡೆದುಕೊಂಡಿದ್ದಾರೆ.
ಅಂತಿಮ ಪ್ಲೇಸ್ಮೆಂಟ್ ಪ್ರಕ್ರಿಯೆ ಮುಗಿಸಿರುವ ಇನ್ಸ್ಟಿಟ್ಯೂಟ್ನ 2010-18ನೇ ಸಾಲಿನ ಔಟ್ಗೋಯಿಂಗ್ ಬ್ಯಾಚ್ ಎಂದಿಗಿಂತಲೂ ಅತೀದೊಡ್ಡ ಬ್ಯಾಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ 7 ವಿದ್ಯಾರ್ಥಿಗಳಿಗೆ ರೂ.50ಲಕ್ಷಕ್ಕೂ ಅಧಿಕ ಪ್ಯಾಕೇಜ್ ಆಫರ್ ಸಿಕ್ಕಿದೆ.
ಈ ಸಂಸ್ಥೆಯ 31 ವಿದ್ಯಾರ್ಥಿಗಳಿಗೆ ದಕ್ಷಿಣ ಅಮೆರಿಕಾ, ಥಾಯ್ಲೆಂಡ್, ಆಫ್ರಿಕಾ, ಸೌತ್ ಈಸ್ಟ್ ಏಷ್ಯಾ ದೇಶಗಳಲ್ಲಿ ಅಂತಾರಾಷ್ಟ್ರೀಯ ಜವಾಬ್ದಾರಿಗಳು ಸಿಕ್ಕಿವೆ.
ಒಟ್ಟು 288 ವಿದ್ಯಾರ್ಥಿಗಳಿರುವ ಈ ಬ್ಯಾಚ್ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಪ್ಲೇಸ್ಮೆಂಟ್ ಆಗಿದೆ. ಒಟ್ಟು 110 ಕಂಪನಿಗಳು ಇದರಲ್ಲಿ ಭಾಗವಹಿಸಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.