ನವದೆಹಲಿ: 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ಥಾನ ಸೇನೆಯಿಂದ ಅಮಾನುಷ ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗಿ ಮೃತನಾದ ಸೈನಿಕ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರ ಸಾವಿಗೆ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಅವರ ಕುಟುಂಬಕ್ಕೆ ಹಾಗೂ ಸಮಸ್ತ ಭಾರತೀಯರಿಗೆ ತೀವ್ರ ನಿರಾಸೆಯುಂಟಾಗಿದೆ.
ಕಾಲಿಯಾರನ್ನು ಅಮಾನುಷವಾಗಿ ಕೊಂದ ಪಾಕಿಸ್ಥಾನದ ವಿರುದ್ಧ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ಗೆ ಮೇಲ್ಮನವಿ ಸಲ್ಲಿಸಲು ನರೇಂದ್ರ ಮೋದಿ ಸರ್ಕಾರ ನಿರಾಕರಿಸಿದೆ. ಈ ಮೂಲಕ ಯೋಧನೊಬ್ಬನ ಬೆಲೆಕಟ್ಟಲಾಗದ ತ್ಯಾಗವನ್ನು ನಿರ್ಲಕ್ಷ್ಯ ಮಾಡಿದೆ.
ಈ ವಿಷಯದಲ್ಲಿ ಯುಪಿಎ ಹಾದಿಯನ್ನೇ ಹಿಡಿದಿರುವ ಎನ್ಡಿಎ ಸರ್ಕಾರ, ಕಾಲಿಯಾ ಮರಣಕ್ಕೆ ಸಂಬಂಧಿಸಿದಂತೆ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ಗೆ ಮನವಿ ಸಲ್ಲಿಸುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ ಎಂದು ಸಂಸತ್ತಿಗೆ ತಿಳಿಸಿದೆ.
ಕಾಲಿಯಾ ಕುಟುಂಬದ ಬೇಡಿಕೆಯಂತೆ ಪಾಕಿಸ್ಥಾನದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವುದು ಸಾಧ್ಯವಿಲ್ಲದ ಮಾತು ಎಂದು ಅದು ಹೇಳಿದೆ.
ವಿರೋಧ ಪಕ್ಷದಲ್ಲಿದ್ದ ಸಂದರ್ಭ ಈ ವಿಷಯದಲ್ಲಿ ಬಿಜೆಪಿ ಯುಪಿಎಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು, ಆದರೆ ಇದೀಗ ಅಧಿಕಾರಕ್ಕೇರಿರುವ ಬಿಜೆಪಿ ಹಿಂದಿನ ಸರ್ಕಾರದ ಹಾದಿಯನ್ನೇ ಹಿಡಿದಿರುವುದು ದುರಾದೃಷ್ಟ.
ಯುದ್ಧದ ವೇಳೆ ಪಾಕ್ ಸೇನೆಯು ಕಾಲಿಯಾ ಅವರನ್ನು ಕೊಲ್ಲುವುದಕ್ಕೂ ಮುನ್ನ ತೀವ್ರವಾಗಿ ಹಿಂಸಿಸಿತ್ತು, ಅವರ ಜನನಾಂಗಗಳನ್ನು ಕತ್ತರಿಸಿ ಹಾಕಿತ್ತು. ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾದ ಅವಕಾಶ ಭಾರತಕ್ಕಿದೆಯಾದರೂ ನಮ್ಮನಾಳುವವರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.