ಹನುಮಗಿರಿ ಬೆಟ್ಟದಲ್ಲಿ ಶ್ರೀ ಹನುಮ ಜಯಂತಿ ಮಹೋತ್ಸವ, ಗೋ ಮಾತೆಯನ್ನು ರಾಷ್ಟ್ರ ಮಾತೆಯಾಗಿ ಸ್ವೀಕರಿಸೋಣ …
– ಶ್ರೀ ಶ್ರೀ ಶ್ರೀ ನಾರಾಯಣಾನಂದ ಸರಸ್ವತಿ
ಅಸಾಧ್ಯಂ ಸಾಧಕ ಸ್ವಾಮಿ
ಅಸಾಧ್ಯ ತವ ಕಿಂ ವಧ
ರಾಮ ದೂತ ಕೃಪಾ ಸಿಂಧೋ
ಮತ್ಕಾರ್ಯಂ ಸಾಧ್ಯಯೇತ್ ಪ್ರಭು …
ಮರ್ಕಟೇಕ್ಷು ಮಹೋತ್ಸಾಹ
ಸರ್ವ ಗ್ರಹ ನಿವಾರಣಃ
ಶತ್ರು ಸಂಹಾರ
ಮಾಂ ರಕ್ಷ ಶ್ರೇಯ
ಆಯುಷ್ಯ ದೇಹಿಮೆ …
ಅಸಾಧ್ಯಗಳನ್ನು ಸಾಧ್ಯ ಮಾಡುವ ಹೇ ಭಗವಂತನೇ ನಿನಗೆ ಅಸಾಧ್ಯವಾದದ್ದು ಯಾವುದು ಇಲ್ಲಾ !! ಶ್ರೀ ರಾಮನ ದೊತ ಕೃಪಾ ಸಿಂಧೋ ನನ್ನ ಎಲ್ಲಾ ಕಾರ್ಯಗಳನ್ನು ಸಾಧಿಸಲು ಮಾರ್ಗ ತೋರಿಸು ಹನುಮಗಿರಿ ಬೆಟ್ಟದಲ್ಲಿ ನೆಲೆಸಿರುವ ಶ್ರೀ ಹನುಮ – ಅರ್ಕೆಶ್ವರ ವೀರ ಹನುಮಾನ್ !! ನಿನ್ನ ಬಳಿ ಭಕ್ತಿಯಿಂದ ಬಂದವರಿಗೆ ಅಸಾಧ್ಯ ಯಾವುದು ಇಲ್ಲಾ !!! ನನ್ನ ಮನಸ್ಸಿನಲ್ಲಿ ಮಹೋನ್ನತ ಉತ್ಸಾಹ ತುಂಬಿ (ಸರ್ವ ಗ್ರಹ ನಿವಾರಣಃ) ಸರ್ವ ಗ್ರಹದಿಂದ ಬರುವ ಸಮಸ್ಯೆಗಳನ್ನು ನಿವಾರಿಸು ಶ್ರೀ ಹನುಮ…!!! ಶತ್ರುಗಳನ್ನು ಸಂಹರಿಸಿ ನನ್ನಗೆ ಶ್ರೇಯಸ್ಸು ಮತ್ತು ಆಯುಷ್ಯ ನೀಡು ಹನುಮಂತ – ಹೇ ಭಗವಂತ … !!! ಜಗತ್ತಿನ ಸಕಲ ಜೀವಿಗಳಿಗೂ ನೀಡು ನೀ – ಅಭಯವಾ ಶ್ರೀ ಹನುಮ – ಅರ್ಕೆಶ್ವರ ವೀರ ಹನುಮಾನ್ !!
ಬೆಂಗಳೂರು : ಬನಶಂಕರಿಯ 3 ನೇ ಹಂತದ ಇಟ್ಟ ಮಡ್ದು ಹಾಗು ಉತ್ತರಹಳ್ಳಿಯ ಅರೆಹಳ್ಳಿ ಗ್ರಾಮದ ಎಜಿಎಸ್ ಬಡಾವಣೆಯ ಸಮೀಪದಲ್ಲಿರುವ ಹನುಮಗಿರಿ ಬೆಟ್ಟದಲ್ಲಿ ಹನುಮ ಜಯಂತಿ ಉತ್ಸವದಲ್ಲಿ ಉಪನ್ಯಾಸ ನೀಡಲು ಆಗಮಿಸಿದ್ದ ಶ್ರೀ ಶ್ರೀ ಶ್ರೀ ನಾರಾಯಣಾನಂದ ಸರಸ್ವತಿಯವರ (ಉಪನ್ಯಾಸ ಮತ್ತು ಶ್ರೀಗಳ ಆಶೀರ್ವಚನ) ಪಾದಪೂಜೆಯನ್ನು ಶ್ರೀ ಹನುಮಗಿರಿ ಬೆಟ್ಟದಲ್ಲಿ ಶ್ರೀ ಹನುಮಗಿರಿ ಸೇವಾ ಸಮಿತಿಯ ವತಿಯಿಂದ ಸ್ವಾಮೀಜಿಯವರ ಪಾದ ಪೂಜೆ ಬಹಳ ಸಾಂಗವಾಗಿ ನೆರವೇರಿತು.
ಪಾದ ಪೂಜೆ ಸ್ವೀಕರಸಿ ಶ್ರೀ ಹನುಮಗಿರಿ ಬೆಟ್ಟದಲ್ಲಿ ಅರ್ಕೆಶ್ವರ ವೀರ ಹನುಮಾನ್ ದೇವಾಲಯದ ಮುಂಭಾಗದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಶ್ರೀ ಶ್ರೀ ಶ್ರೀ ನಾರಾಯಣಾನಂದ ಸರಸ್ವತಿಯವರು ( ಶ್ರೀಗಳ ಉಪನ್ಯಾಸ) ಆಶೀರ್ವಚನ ನೀಡಿದರು.
ಸಭೆಯಲ್ಲಿ ಗೋ ರಕ್ಷಣೆಯ ಬಗ್ಗೆ ಮಾತನಾಡುತ್ತಾ ನಮ್ಮ ರಾಷ್ಟ್ರ ಮಾತಾ ಗೋ ಮಾತೆಯಾಗಬೇಕು ಎಂಬ ನಿರ್ಣಯವನ್ನು ಎಲ್ಲಾ ಸಾಧು ಸಂತರು ತಮ್ಮ ಹೃದಯದ ಅಂತರಾಳದಿಂದ ಹೇಳಿದ್ದಾರೆ. ರಾಷ್ಟ್ರ ಪಕ್ಷಿ ಮತ್ತು ರಾಷ್ಟ್ರ ಪ್ರಾಣಿ ನಮಗೆ ಇದೆ ಅದರೆ ನಮಗೆ ರಾಷ್ಟ್ರ ಮಾತೆ ಇಲ್ಲಾ ಎಂದರು.
ಆದರಿಂದ ಈಗಿನ ಪ್ರಧಾನಮಂತ್ರಿಗಳು ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡಿ ನಿರ್ಣಯವನ್ನು ತೆಗದು ಕೊಳ್ಳಬೇಕು ಎಂದು ಧರ್ಮ ಸಂಸತ್ತಿನಲ್ಲಿ ಕರೆಯನ್ನು ನೀಡಿ ಹಾಗು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯನ್ನು ಆದಷ್ಟು ಬೇಗ ಪುರಸ್ಕರಿಸಬೇಕೆಂದು ಪರಮ ಪೂಜ್ಯರಾದ ಪೇಜವಾರ ಶ್ರೀಗಳ ನೇತೃತ್ವದಲ್ಲಿ ನಿರ್ಣಯವನ್ನು ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದು ಡಿಸೆಂಬರ್ 15 ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರ ಮಾಡಬೇಕು ಎಂದು ಉಡುಪಿಯಲ್ಲಿ ನಡೆದ ಗೋ ಸಂರಕ್ಷಣೆ ಚರ್ಚೆಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಸಾಧು – ಸಂತರು ಒತ್ತಾಯಿಸಲಿದ್ದಾರೆ ಎಂದು ಶ್ರೀಗಳು ಮಾತನಾಡುತ್ತಿದ್ದರು.
ಅಸ್ಪೃಶ್ಯತೆಯ ತೊಡಕು ಈಗ ಸ್ವಲ್ಪ ಕಡಿಮೆಯಾಗಿದ್ದು ಇದನ್ನು ಸಂಪೂರ್ಣ ಹೋಗಲಾಡಿಸಬೇಕು – ಹಿಂದು ಧರ್ಮದಲ್ಲಿ ಆರಂಭದಿಂದಲೂ ಅಸ್ಪೃಶ್ಯತೆ ಇರಲಿಲ್ಲ. ಅದನ್ನು ಕೆಲವರು ಹುಟ್ಟು ಹಾಕಿದರು. ಭಗವಂತನ ಸೃಷ್ಠಿಯಲ್ಲಿ ಎಲ್ಲರೂ ಶ್ರೇಷ್ಠ ಎಂದರು.
ಅರ್ಕೆಶ್ವರ, ವೀರ ಹನುಮಾನ್ ಗೆ ಪ್ರತಿ ಶನಿವಾರ ಬೆಳಗ್ಗೆ 7- 30 ರಿಂದ 8 – 30 ರವರೆಗೆ ಪೂಜೆ ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ಪ್ರತಿ ನಿತ್ಯ ಪೂಜೆ ಹಾಗು ಭಜನೆ ನಡೆಯುವಂತೆ ಆಗಬೇಕೆಂದು ಶ್ರೀಗಳು ನುಡಿದರು.
ಹನುಮಗಿರಿ ಬೆಟ್ಟದಲ್ಲಿ ಶ್ರೀ ಹನುಮ ಜಯಂತಿ ಮಹೋತ್ಸವದಲ್ಲಿ ಶ್ರೀ ಕ್ಷೇತ್ರ ಪ್ರಗತಿಗೊಂಡು ಉತ್ತಮ ಧಾರ್ಮಿಕ ಸಮಾಜ ಕೇಂದ್ರ ಆಗಬೇಕು ಎಂದು ಮಾಧವ್ ಜಿ. ಹೆಬ್ಬಾರ್ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಮಂಜುನಾಥ ಶರ್ಮರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಡಿಸೆಂಬರ್ 3 ರ ಭಾನುವಾರ ಹನುಮಗಿರಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಹನುಮಜಯಂತಿ ಕಾರ್ಯಕ್ರಮದಲ್ಲಿ ಶ್ರೀಚಿತ್ತ ಭಜನಾಮಂಡಳಿಯ ಇಂದಿರಾಣಿ ರಾಜಶೇಖರ್ರವರ ನೇತೃತ್ವದಲ್ಲಿ ಭಜನಾಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಹನುಮ ಜಯಂತಿಯ ಪ್ರಯುಕ್ತ ಹನುಮಗಿರಿ ಬೆಟ್ಟದಲ್ಲಿ ಭಾನುವಾರ ಬೆಳಗಿನಿಂದಲೇ ಮಕ್ಕಳಿಂದ ವೃದ್ಧರವರೆಗೂ ಅನೇಕ ಭಕ್ತಾದಿಗಳು ನೆರೆದಿದ್ದರು. ಸುಮಾರು 3 ಗಂಟೆಗಳ ಕಾಲ ಜಯಂತ್ಯುತ್ಸವವು ನಡೆಯಿತು. ಮಕ್ಕಳು, ಹಿರಿಯರು ಹಾಗು ಸ್ತ್ರೀಯರು ಮತ್ತು ಮಾತೆಯರು ಮತ್ತು ಸುತ್ತಮುತ್ತಲಿನ ನಿವಾಸಿಗಳು, ಅರ್ಕೆಶ್ವರ, ವೀರ ಹನುಮಾನ್ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಪ್ರಧಾನ ಅರ್ಚಕಾರದ ವಿಜಯ ಆಚಾರ್ ಅರ್ಕೆಶ್ವರ, ವೀರ ಹನುಮಾನ್ಗೆ ಮಹಾಮಂಗಳಾರತಿಯನ್ನು ನೆರವರಿಸಿದರು. ನಂತರ ಅರ್ಚಕರಾದ ನಾಗೇಶ್ರವರು ತೀರ್ಥ -ಪ್ರಸಾದ ವಿತರಿಸಿದರು.
ಹನುಮ ಜಯಂತಿಯ ಪ್ರಯುಕ್ತ ಇಲ್ಲಿ ನೆರವೇರಿದ ಹನುಮನ ಪೂಜೆ, ಭಜನೆ, ಶ್ರೀ ಶ್ರೀ ಶ್ರೀ ನಾರಾಯಣಾನಂದ ಸರಸ್ವತಿಯವರ ಉಪನ್ಯಾಸ ಮತ್ತು ಶ್ರೀಗಳ ಆಶೀರ್ವಚನಕ್ಕೆ ನೆರೆದಿದ್ದ ಭಕ್ತರು ಭಾಗಿಯಾದರು.
ಪ್ರಕೃತಿ ರಮಣೀಯ ಹನುಮಗಿರಿಯ ಬೆಟ್ಟದ ತುತ್ತ ತುದಿಯಲ್ಲಿ ಹನುಮನ ಜಪ – ತಪ – ನಾಮಸ್ಮರಣೆ ಭಜನೆಗಳಲ್ಲಿ ಭಕ್ತರು ಭಕ್ತಿ ಯಿಂದ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು. ಹನುಮಗಿರಿ ಬೆಟ್ಟದಲ್ಲಿ ಹನುಮ ಜಯಂತಿ ಉತ್ಸವವು ಬಹಳ ಸಾಂಗವಾಗಿ ನೆರವೇರಿತು. ಅನೇಕ ವರ್ಷಗಳಿಂದಲೂ ಹನುಮಗಿರಿ ಬೆಟ್ಟದಲ್ಲಿ ಸತತವಾಗಿ ನಡೆಯುತ್ತಿರುವ ಶ್ರೀ ಹನುಮ ಜಯಂತಿ ಮಹೋತ್ಸವ, ಶ್ರೀ ರಾಮನವಮಿ ಕಾರ್ಯಕ್ರಮಗಳು ಹಾಗೂ ಮಹಾಶಿವರಾತ್ರಿ ಪೂಜಾ ಮಹೋತ್ಸವದ ಜೊತೆ ಈ ವರ್ಷ ಆಗಸ್ಟ್ ತಿಂಗಳಲ್ಲಿ ಜರುಗಿದ ಗಾಳಿಪಟ ಹಬ್ಬವನ್ನೂ ಇಲ್ಲಿ ಸ್ಮರಿಸಬಹುದಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ, ಭಕ್ತಿ ಶ್ರದ್ದೆಗಳಿಂದ, ಯಶಸ್ವಿಯಾಗಿ ನೆರವೇರಿಸುತ್ತಿರುವ ಶ್ರೀ ಹನುಮಗಿರಿ ಸೇವಾ ಸಮಿತಿಯ ಪ್ರತಿಯೊಬ್ಬ ಕಾರ್ಯಕರ್ತರಿಗೂ ಈ ಯಶಸ್ಸು ಸಲ್ಲಬೇಕು.
ಹನುಮಗಿರಿ ಕ್ಷೇತ್ರದ ಬಗ್ಗೆ –
ಮಾಂಡವ್ಯರ ತಪೋಭೂಮಿಯಲ್ಲಿ ನೆಲೆಸಿದ ಹನುಮನ ಕ್ಷೇತ್ರ ’ಹನುಮಗಿರಿ’ – ತ್ರೇತಾಯುಗದಲ್ಲಿ ಹನುಮಂತ ಲಕ್ಷ್ಮಣನಿಗಾಗಿ ಸಂಜೀವಿನಿ ಹೊತ್ತೊಯ್ಯುತ್ತಿದ್ದಾಗ ಪರ್ವತದ ಒಂದು ತುಣುಕು ಬಿದ್ದ ಸ್ಥಳ, ಮಾಂಡವ್ಯ ಮಹರ್ಷಿಗಳ ತಪೋಭೂಮಿ ಎಂಬೆಲ್ಲ ಐತಿಹ್ಯವಿರುವ ಉತ್ತರಹಳ್ಳಿಯ ಅರೆಹಳ್ಳಿ ಗ್ರಾಮದ ಎಜಿಎಸ್ ಬಡಾವಣೆಯ ಸಮೀಪದಲ್ಲಿದೆ. ಹನುಮಗಿರಿ ಕ್ಷೇತ್ರವು ಬಹಳ ಐತಿಹಾಸಿಕ ಮಹತ್ವ ಹೊಂದಿದ್ದು ಇದು ರಾಮಾಯಣದ ಹಿನ್ನೆಲೆ ಉಳ್ಳ ಕ್ಷೇತ್ರವೆಂದು ಪ್ರಸಿದ್ದಿಯಾಗಿದೆ ಹಾಗು ಅರ್ಕೆಶ್ವರ, ವೀರ ಹನುಮಾನ್ ಪೂಜೆಯು ಪ್ರತಿ ಶನಿವಾರ ಬೆಳಗ್ಗೆ 7- 30 ರಿಂದ 8 – 30 ರವರೆಗೆ ಪೂಜೆ ನಡೆಯುತ್ತದೆ ಎಂದು ದೇವಸ್ಥಾನದ ಪ್ರಧಾನ ಆರ್ಚಕರು ಹೇಳುತ್ತಾರೆ. ಭಗವಂತನ ಪೂಜೆಯಲ್ಲಿ ಪಾಲ್ಗೊಂಡಿದ್ದ ಇಲ್ಲಿನ ಸ್ಥಳೀಯರು ಪ್ರತಿನಿತ್ಯ ಭಗವಂತನ ಪೂಜೆ ನಡೆಯಬೇಕು ಹಾಗು ಇದು ರಾಮಾಯಣದ ಹಿನ್ನೆಲೆ ಉಳ್ಳ ಕ್ಷೇತ್ರವೆಂದು ಪ್ರಸಿದ್ದಿಯಾಗಿದೆ ಎನ್ನುತ್ತಾರೆ.
ಬರಹ – ತೀರ್ಥಹಳ್ಳಿ ಅನಂತ ಕಲ್ಲಾಪುರ
ಛಾಯಾ ಚಿತ್ರ – ನವೀನ್ , ಬೆಂಗಳೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.