ಹೈದರಾಬಾದ್: ಗ್ಲೋಬಲ್ ಎಂಟರ್ಪ್ರನೈರ್ಶಿಪ್ ಸಮಿತ್ಗೂ ಮುಂಚಿತವಾಗಿ ಹೈದರಾಬಾದ್ನ್ನು ಭಿಕ್ಷಾಟನೆ ಮುಕ್ತಗೊಳಿಸಲು ಸಕಲ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಇಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದೀಗ ಭಿಕ್ಷುಕರ ಬಗ್ಗೆ ಮಾಹಿತಿ ನೀಡಿದವರಿಗೆ ರೂ.500 ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ಭಿಕ್ಷೆ ಬೇಡುವುದನ್ನು, ಬೀದಿಯನ್ನು ಮಲಗುವುದನ್ನು ತಡೆಗಟ್ಟುವ ಸಲುವಾಗಿ ಕಂಟ್ರೋಲ್ ರೂಮ್ನ್ನು ತೆರೆಯಲಾಗಿದ್ದು, ಇಲ್ಲಿ ಬಂದು ಇಂತಹವರ ಬಗ್ಗೆ ಮಾಹಿತಿ ನೀಡಿದರೆ ರೂ.500 ಬಹುಮಾನ ಸಿಗಲಿದೆ.
ಈಗಾಗಲೇ ಹಲವಾರು ವಸತಿ ರಹಿತರನ್ನು ಸರ್ಕಾರಿ ವಸತಿ ಗೃಹಗಳಿಗೆ ಶಿಫ್ಟ್ ಮಾಡಲಾಗುತ್ತಿದೆ ಎನ್ನಲಾಗಿದೆ.
ಅಕ್ಟೋಬರ್ನಿಂದಲೇ ಈ ಕಾರ್ಯ ಆರಂಭವಾಗಿದ್ದು, ರಸ್ತೆಯಲ್ಲಿ ಸಿಕ್ಕ ಭಿಕ್ಷುಕರನ್ನು ಚಮಚಲಗೂಡು ಜೈಲು ಸಮೀಪದ ಆನಂದ್ ಆಶ್ರಮಗೆ ಶಿಫ್ಟ್ ಮಾಡಲಾಗಿದೆ.
ಗ್ಲೋಬಲ್ ಎಂಟರ್ಪ್ರನೈರ್ಶಿಪ್ ಸಮಿತ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಸೇರಿದಂತೆ ವಿದೇಶ ನೂರಾರು ಗಣ್ಯರು ಆಗಮಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.