ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸೋಮವಾರ ನಡೆದ ಎನ್ಕೌಂಟರ್ನಲ್ಲಿ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಝರ್ನ ಸೋದರಳಿಯ ಸೇರಿದಂತೆ 3 ಉಗ್ರರು ಮೃತಪಟ್ಟಿದ್ದಾರೆ.
ಮೃತಪಟ್ಟ ಮಸುದ್ನ ಸೋದರಳಿಯನನ್ನು ತಲ್ಹಾ ರಶೀದ್ ಎಂದು ಗುರುತಿಸಲಾಗಿದೆ, ಮತ್ತಿಬ್ಬರನ್ನು ಮೊಹಮ್ಮದ್ ಭಾಯ್, ವಾಸೀಮ್ ಎಂದು ಗುರುತಿಸಲಾಗಿದೆ. ಇವರು ಜೈಶೇಯ ಡಿವಿಶನಲ್ ಕಮಾಂಡರ್ ಆಗಿದ್ದರು.
ಮೃತ ಉಗ್ರರಿಂದ ಎಕೆ-47 ರೈಫಲ್, ಅಮೆರಿಕಾ ಮೇಡ್ M4 ರೈಫಲ್ ಹಾಗೂ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಉಗ್ರರ ಹತ್ಯೆ ಭದ್ರತಾ ಪಡೆಗಳಿಗೆ ಸಿಕ್ಕ ಅತೀದೊಡ್ಡ ಗೆಲುವೆಂದೇ ಬಣ್ಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.