ನವದೆಹಲಿ: ಎರಡು-ಎರಡೂವರೆ ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಸುಮಾರು 2.24 ಲಕ್ಷ ಕಂಪನಿಗಳನ್ನು ನೋಟ್ ಬ್ಯಾನ್ ಬಳಿಕ ಮುಚ್ಚಿರುವುದಾಗಿ ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
56 ಬ್ಯಾಂಕುಗಳ ಪ್ರಾಥಮಿಕ ತನಿಖೆಯಲ್ಲಿ 35 ಸಾವಿರ ಕಂಪನಿಗಳ 58 ಸಾವಿರ ಅಕೌಂಟ್ಗಳಲ್ಲಿ ನೋಟ್ಬ್ಯಾನ್ ಬಳಿಕ 17 ಸಾವಿರ ಕೋಟಿ ರೂಪಾಯಿ ಜಮಾ ಮತ್ತು ವಿದ್ಡ್ರಾಗಳು ನಡೆದಿವೆ ಎಂದು ತಿಳಿಸಿದೆ.
ನವೆಂಬರ್ 8ರವರೆಗೆ ನೆಗೆಟಿವ್ ಓಪನಿಂಗ್ ಬ್ಯಾಲೆನ್ಸ್ ಇದ್ದ ಕಂಪನಿ ಅಕೌಂಟ್ಗಳು ಬಳಿಕ ಕೋಟ್ಯಾಂತರ ಜಮೆಗಳು ವಿದ್ಡ್ರಾಗಳು ನಡೆದಿವೆ. ಈ ವ್ಯವಹಾರಗಳ ಬಗ್ಗೆ ಕಣ್ಣಿಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿತ್ತು. ಪಿಎಂಓ ಸಚಿವಾಲಯ ಸ್ಪೆಷಲ್ ಟಾಸ್ಕ್ ಫೋರ್ಸ್ ಸ್ಥಾಪಿಸಿ ಇಂತಹ ಕಂಪನಿಗಳ ವಿರುದ್ಧ ಕ್ರಮಕೈಗೊಂಡಿದೆ.
ಇದುವರೆಗೆ ನೋಟ್ ಬ್ಯಾನ್ ಬಳಿಕ ಒಟ್ಟು 2.24 ಲಕ್ಷ ಕಂಪನಿಗಳನ್ನು ರದ್ದು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.