ಬೆಂಗಳೂರು: ಡಿಸೆಂಬರ್ನಲ್ಲಿ ಭಾರತದ ಹೆಮ್ಮೆಯ ಇಸ್ರೋ ಪಿಎಸ್ಎಲ್ವಿ ಮೂಲಕ ಒಟ್ಟು 30 ಸೆಟ್ಲೈಟ್ಗಳನ್ನು ಏಕಕಾಲಕ್ಕೆ ನಭಕ್ಕೆ ಚಿಮ್ಮಿಸಲಿದೆ.
‘ಡಿಸೆಂಬರ್ ಎರಡನೇ ವಾರದಲ್ಲಿ ನಮ್ಮ ಮುಂದಿನ ಉಡಾವಣೆಗೆ ಸಜ್ಜಾಗುತ್ತಿದ್ದೇವೆ. ಕಾರ್ಟೊಸ್ಯಾಟ್-2 ಸಿರೀಸ್ನ ಸೆಟ್ಲೈಟ್ನೊಂದಿಗೆ ಇತರ ಸೆಟ್ಲೈಟ್ಗಳು ಉಡಾವಣೆಗೊಳ್ಳುತ್ತಿವೆ’ ಎಂದು ಇಸ್ರೋ ಮುಖ್ಯಸ್ಥ ಕಿರಣ್ ಕುಮಾರ್ ಹೇಳಿದ್ದಾರೆ.
ಶ್ರೀಹರಿಕೋಟಾದಲ್ಲಿನ ಸ್ಪೇಸ್ಕ್ರಾಫ್ಟ್ನಲ್ಲಿ ಪಿಎಸ್ಎಲ್ವಿ-ಸಿ 30ಗಳು ನಭಕ್ಕೆ ಚಿಮ್ಮಲಿವೆ.
ಒಟ್ಟು 25 ನ್ಯಾನೋ ಸೆಟ್ಲೈಟ್, 3 ಮೈಕ್ರೋ ಸೆಟ್ಲೈಟ್, 1 ಕಾರ್ಟೊಸ್ಯಾಟ್ ಸೆಟ್ಲೈಟ್ಗಳನ್ನು ಇವು ಹೊಂದಲಿವೆ. 1 ಯೂನಿವರ್ಸಿಟಿ ಸೆಟ್ಲೈಟ್ ಇರಲೂಬಹುದು ಎಂದು ಇಸ್ರೋ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.