ನವದೆಹಲಿ: ರಾಜಸ್ಥಾನ ಬಿಜೆಪಿ ಸಂಸದ ಪಿಪಿ ಚೌಧರಿ ಅವರು ‘ಸಂಸದ್ ರತ್ನ 2015’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಂಸದರಾದ ಪ್ರಥಮ ಬಾರಿಗೆ ಇವರು ಈ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಸಂಸದರು ಕೇಳಿದ ಪ್ರಶ್ನೆ, ಚರ್ಚೆಯಲ್ಲಿ ಭಾಗವಹಿಸುವಿಕೆ, ಪ್ರೈವೇಟ್ ಮೆಂಬರ್ ಬಿಲ್ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರೈಮ್ ಪಾಯಿಂಟ್ ಫೌಂಡೇಶನ್ ಈ ಪ್ರಶಸ್ತಿಗೆ ಸಂಸದರನ್ನು ಆಯ್ಕೆ ಮಾಡುತ್ತದೆ.
ಚೌಧರಿ ಅವರು 16ನೇ ಲೋಕಸಭೆಯ 176 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಎಲ್ಲಾ ವಿಧದ ಕಾರ್ಯಗಳಲ್ಲೂ ಇತರ ಮೊದಲ ಸಂಸದರಿಗಿಂತ ಮುಂದೆ ಇದ್ದಾರೆ. ಇದಕ್ಕಾಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಫೌಂಡೇಶನ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.