ವಾಷಿಂಗ್ಟನ್: ತಾನು ವಾಸವಿದ್ದ ರೆಸಿಡೆನ್ಸ್ ಹಾಲ್ನ ಬುಲೆಟಿನ್ ಬೋರ್ಡ್ನಲ್ಲಿ ಸ್ವಸ್ಥಿಕ್ ಚಿತ್ರವನ್ನು ಪ್ರದರ್ಶಿಸಿದ ವಿದ್ಯಾರ್ಥಿಯೊಬ್ಬನನ್ನು ಅಮಾನತುಗೊಳಿಸಿದ ಅಮೆರಿಕಾದ ಪ್ರತಿಷ್ಟಿತ ವಿಶ್ವವಿದ್ಯಾಲಯವೊಂದು ಕೊನೆಗೂ ತನ್ನ ಅಮಾನತನ್ನು ವಾಪಾಸ್ ಪಡೆದುಕೊಂಡಿದೆ.
ವಿವಿಧ ಸಂಘಟನೆಗಳ ಒತ್ತಡಕ್ಕೆ ಮಣಿದು ಅಮಾನತು ವಾಪಾಸ್ ಪಡೆದುಕೊಂಡಿದ್ದು, ಈ ಬೆಳವಣಿಗೆಯನ್ನು ಹಿಂದೂ ಅಮೆರಿಕನ್ ಫೌಂಡೇಶನ್ ಸ್ವಾಗತಿಸಿದೆ.
ಸ್ವಸ್ಥಿಕ್ನ ಮಹತ್ವವನ್ನು ಇತರರಿಗೆ ತಿಳಿಸುವುದಕ್ಕಾಗಿ ವಿದ್ಯಾರ್ಥಿ ಸ್ವಸ್ಥಿಕ್ ಪ್ರದರ್ಶನ ಮಾಡಿದ್ದ, ಆದರೆ ಇದನ್ನು ಹಿಟ್ಲರ್ನ ನಾಝಿ ಪಕ್ಷದ ಸಂಕೇತವೆಂದು ಇತರರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಇದೇ ಕಾರಣಕ್ಕಾಗಿ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿತ್ತು.
ಬಳಿಕ ವಿವಿಧ ಸಂಘಟನೆಗಳು ಸ್ವಸ್ಥಿಕ್ ಮಹತ್ವವನ್ನು, ಹಿಂದೂ, ಜೈನ, ಬೌದ್ಧ ಧರ್ಮದಲ್ಲಿ ಸ್ವಸ್ಥಿಕ್ಗೆ ಇರುವ ಸ್ಥಾನವನ್ನು ತಿಳಿ ಹೇಳಿದರು. ಇದರಿಂದ ಸಮಾಧಾನಗೊಂಡ ಯೂನಿವರ್ಸಿಟಿ ವಿದ್ಯಾರ್ಥಿಯ ಅಮಾನತನ್ನು ವಾಪಾಸ್ ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.