ನವದೆಹಲಿ: ತ್ವರಿತ ನಿರ್ಧಾರ ಕೈಗೊಳ್ಳುವಿಕೆ, ಉತ್ತಮ ನಾಯಕತ್ವ, ಟೀಮ್ ವರ್ಕ್, ಪಾರದರ್ಶಕತೆ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಯಾವುದೇ ಸಂಸ್ಥೆಯ ಪ್ರಗತಿಗೆ ಅತೀಮುಖ್ಯ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವಲಯದ ಸಂಸ್ಥೆಗಳನ್ನು ಬೆಂಬಲಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕಾರ್ಯಕ್ಷಮತೆ ತೋರ್ಪಡಿಸದ ಅಧಿಕಾರಿಗಳನ್ನು ವಜಾಗೊಳಿಸುವುದು ಅಥವಾ ಸ್ವಯಂ ನಿವೃತ್ತಿ ನೀಡುವುದು ಕೂಡ ಸರ್ಕಾರದ ಕರ್ತವ್ಯ ಎಂದರು.
ಖಾಸಗಿ ವಲಯದ ಸಂಸ್ಥೆಯ ಸಿಎಂಡಿ ಆರ್.ಕೆ.ಗುಪ್ತಾ ಅವರಿಂದ 42.13 ಕೋಟಿ ರೂಪಾಯಿಗಳ ಚೆಕ್ ಪಡೆದು ಅವರು ಮಾತನಾಡಿದರು. ಈ ವಲಯದಲ್ಲಿ ಹೆಚ್ಚಿನ ಸಂಭಾವ್ಯತೆಗಳು ಇರುವುದರಿಂದ ಸರ್ಕಾರ ಮೂಲಸೌಕರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.