ಬೆಂಗಳೂರು: ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯದ ಜನಪ್ರಿಯ ಕನ್ನಡ ಪತ್ರಿಕೆಗಳು ಜನಮತ ಸಂಗ್ರಹ ನಡೆಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ.
ದೇಶ-ವಿದೇಶಗಳಲ್ಲಿನ ಲಕ್ಷಾಂತರ ಮಂದಿ ಈ ಜನಮತ ಸಂಗ್ರಹದಲ್ಲಿ ಭಾಗಿಯಾಗಿದ್ದು, ಮೋದಿ ಜನಪ್ರಿಯತೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಕರ್ನಾಟಕದ ಸಂಸದರ ಸಾಧನೆಯ ಬಗ್ಗೆ ಜನಮತ ಸಂಗ್ರಹಿಸಿದಾಗ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯದಲ್ಲೇ ಉತ್ತಮ ಸಂಸದ ಎಂಬ ಅಭಿಪ್ರಾಯ ಮೂಡಿಬಂದಿದೆ.
ಅನುದಾನ ಬಿಡುಗಡೆಯಲ್ಲಿ ಈ ಹಿಂದೆ ಪ್ರಥಮ ಸ್ಥಾನ ಪಡೆದಿದ್ದ ನಳಿನ್, ಸಂಸತ್ತಿನಲ್ಲಿ ಹಾಜರಾತಿ ಮುಂತಾದವುಗಳನ್ನು ಪರಿಗಣಿಸಿ ಜನ ನಳಿನ್ ಕುಮಾರ್ ಕಟೀಲ್ರನ್ನು ಉತ್ತಮ ಸಂಸದ ಎಂದು ಆಯ್ಕೆ ಮಾಡಿದ್ದಾರೆ.
ಇವರ ನಂತರದ ಸ್ಥಾನವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪಡೆದುಕೊಂಡಿದ್ದಾರೆ.
ಎಲ್ಲಾ ರಾಜ್ಯ ಪತ್ರಿಕೆಗಳು ನಡೆಸಿದ ಸಮೀಕ್ಷೆಯಲ್ಲೂ ಮೋದಿ ಉತ್ತಮ ನಾಯಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಳಿನ್ ಕುಮಾರ್ ಉತ್ತಮ ಸಂಸದ ಎಂದು ಜನ ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡಿಗರಿಗೆ ಮೋದಿಯ ಒಂದು ವರ್ಷದ ಆಡಳಿತ ತೃಪ್ತಿಯನ್ನು ತಂದಿದೆ ಎಂಬುದು ಎಲ್ಲಾ ಸಮೀಕ್ಷೆಗಳಿಂದಲೂ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.