ನವದೆಹಲಿ: ಬಾಂಗ್ಲಾದಲ್ಲಿ ಆಶ್ರಯ ಪಡೆದುಕೊಂಡಿರುವ ರೊಹಿಂಗ್ಯಾ ಮುಸ್ಲಿಮರಿಗಾಗಿ ಭಾರತ ಸುಮಾರು 620 ಟನ್ ಆಹಾರ ಮತ್ತು ಸೊಳ್ಳೆ ಪರದೆಗಳನ್ನು ಕಳುಹಿಸಿಕೊಟ್ಟಿದೆ.
ಸೋಮವಾರ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ ಡೀಪ್ ವಾಟರ್ ಪೋರ್ಟ್ನಿಂದ ಆಹಾರ, ಸೊಳ್ಳೆ ಪರದೆಗಳನ್ನು ಶಿಪ್ಪಿಂಗ್ ಮಾಡಲಾಯಿತು.
ಭಾರತ ಸರ್ಕಾರದ ಆದೇಶದ ಮೇರೆಗೆ ನ್ಯಾಷನಲ್ ಅಗ್ರಿಕೆಲ್ಚರ್ ಕೋಅಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ 62 ಸಾವಿರ ಆಹಾರ ಪೊಟ್ಟಣಗಳನ್ನು ತಯಾರಿಸಿದೆ. ತಲಾ ಒಂದು ಪೊಟ್ಟಣದಲ್ಲಿ 5 ಕೆಜಿ ಅಕ್ಕಿ, 2 ಕೆಜಿ ದಾಲ್, ಖಾದ್ಯ ತೈಲ, ಸಕ್ಕರೆ, ಉಪ್ಪು, ಟಿ ಮತ್ತು ಮಿಲ್ಕ್ ಪುಡಿ ಇದೆ. ಅಲ್ಲದೇ ಪ್ರತಿ ಪೊಟ್ಟಣದಲ್ಲಿ ಸೊಳ್ಳೆ ಪರದೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.