ವಿಶ್ವಸಂಸ್ಥೆ: ಕಾಶ್ಮೀರದಲ್ಲಿ ಭಾರತ ದೌರ್ಜನ್ಯ ನಡೆಸುತ್ತಿದೆ ಎಂಬ ತನ್ನ ಸುಳ್ಳು ಆರೋಪವನ್ನು ದೃಢಪಡಿಸಲು ಪ್ಯಾಲೇಸ್ತೇನ್ ಮಹಿಳೆಯೊಬ್ಬಳಿಗೆ ಗುಂಡು ತಗುಲಿ ವಿಕಾರಗೊಂಡ ಫೋಟೋವನ್ನು ಪ್ರದರ್ಶಿಸಿದ ಪಾಕಿಸ್ಥಾನದ ನಿಜ ಬಣ್ಣವನ್ನು ಭಾರತ ಮತ್ತೊಮ್ಮೆ ಬಯಲುಗೊಳಿಸಿದೆ.
ಸುಳ್ಳು ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ಪ್ರತಿನಿಧಿ ಪೌಲೊಮಿ ತ್ರಿಪಾಠಿ, ಪಾಕ್ ತೋರಿಸಿದ ಸುಳ್ಳು ಫೋಟೋ ಮತ್ತು ಕಾಶ್ಮೀರದಲ್ಲಿ ಪಾಕ್ ಉಗ್ರರಿಂದ ಮೃತರಾದ ಸೇನಾಧಿಕಾರಿ ಉಮರ್ ಫಯಾಝ್ ಅವರ ಘೋಟೋವನ್ನು ಪ್ರದರ್ಶಿಸಿದ್ದಾರೆ.
ಗಾಯಾಳು ಮಹಿಳೆಯ ಫೋಟೋವನ್ನು ತೋರಿಸುವ ಮೂಲಕ ಪಾಕಿಸ್ಥಾನ ತಾನು ಜಾಗತಿಕ ಭಯೋತ್ಪಾದನೆಯ ತಾಣ ಎಂಬ ಸತ್ಯವನ್ನು ಮರೆ ಮಾಚುವ ಪ್ರಯತ್ನವನ್ನು ಮಾಡುತ್ತಿದೆ ಎಂದರು.
ಉಮರ್ ಫೋಟೋವನ್ನು ತೋರಿಸಿ, ಇದು ಕಾಶ್ಮೀರದಲ್ಲಿ ನಡೆದ ಘಟನೆಯಾಗಿದ್ದು, ಪಾಕ್ ಪ್ರೋತ್ಸಾಹಿತ ಉಗ್ರರು ಕಾಶ್ಮೀರದ ಯುವ ಅಧಿಕಾರಿಯನ್ನು ಅಮಾನವೀಯವಾಗಿ ಹತ್ಯೆ ಮಾಡುತ್ತಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.