ನವದೆಹಲಿ: ಇನ್ನು ಮುಂದೆ ಗ್ರೂಪ್-ಡಿ ನೌಕರರನ್ನು ರೈಲ್ವೇ ಅಧಿಕಾರಿಗಳು ತಮ್ಮ ಮನೆಯ ಕೆಲಸಗಳಿಗೆ ಬಳಸಿಕೊಳ್ಳುವಂತಿಲ್ಲ. ಅವರನ್ನು ಹಳಿ ನಿರ್ವಹಣೆ ಮತ್ತು ಅಪ್ಕೀಪ್ನಂತಹ ಅವರ ಮೂಲ ಕಾರ್ಯಗಳಿಗೆ ಮಾತ್ರ ನೇಮಿಸಿಕೊಳ್ಳಬೇಕು ಎಂದು ಭಾರತೀಯ ರೈಲ್ವೇ ಮಂಡಳಿ ಮುಖ್ಯಸ್ಥ ಅಶ್ವನಿ ಲೊಹಾನಿ ಆದೇಶ ಹೊರಡಿಸಿದ್ದಾರೆ.
ರೈಲ್ವೇಯಲ್ಲಿ ಅಗತ್ಯವಿಲ್ಲದ ಶಿಷ್ಟಾಚಾರ ಮತ್ತು ವಿಐಪಿ ಸಂಸ್ಕೃತಿಗೆ ಅಂತ್ಯ ಹಾಕಲು ಲೊಹಾನಿ ಮುಂದಾಗಿದ್ದಾರೆ. ಅಧಿಕಾರಿಗಳು ಶೀಘ್ರದಲ್ಲೇ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವ ಗ್ಯಾಂಗ್ಮನ್ ಮತ್ತು ಟ್ರ್ಯಾಕ್ಮನ್ಗಳನ್ನು ಅವರ ಮೂಲಕ ಕಸಬಿಗೆ ಮರಳಿಸಬೇಕು ಎಂದು ಆದೇಶಿಸಿದ್ದಾರೆ.
ಈ ಆದೇಶದಿಂದಾಗಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಡಿ-ಗ್ರೂಪ್ ನೌಕರರನ್ನು ಅಧಿಕಾರಿಗಳು ತಮ್ಮ ಮನೆ ಕೆಲಸಕ್ಕೆ ಬಳಸುವ ಪದ್ಧತಿಗೆ ಅಂತ್ಯ ಬೀಳಲಿದೆ.
ರೈಲ್ವೇಯಲ್ಲಿ ಸುರಕ್ಷತಾ ಸಿಬ್ಬಂದಿಗಳ ಕೊರತೆಯಿದೆ, ಇದರಿಂದಾಗಿ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ. ಈ ಸಂದರ್ಭದಲ್ಲಿ ಲೊಹಾನಿಯವರು ಹೊರಡಿಸಿರುವ ಆದೇಶ ರೈಲ್ವೇಯನ್ನು ಮತ್ತೆ ಹಳಿಗೆ ಮರಳಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.