ಬಾಗಲಕೋಟೆ: ತಾಲೂಕಿನ ಬೆನಕಟ್ಟಿ ಗ್ರಾಮಕ್ಕೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಬಾಗಲಕೋಟ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ನಾಯಕ ಮನೆ ಮನೆಗೆ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಂಡು ಪರಿಸರ ರಕ್ಷಣೆ ಮಾಡುವ ಕುರಿತಂತೆ ಜನರಿಗೆ ತಿಳುವಳಿಕೆ ನೀಡಿದರು.
ಸ್ಥಳಿಯ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಓ, ಕಾರ್ಯದರ್ಶಿ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರೊಂದಿಗೆ ಬೆಳಗ್ಗೆ 6 ರಿಂದ ಗ್ರಾಮದ ಪ್ರತಿ ಓಣಿಗಳಿಗೆ ತೆರಳಿ ಶೌಚಾಲಯ ಇಲ್ಲದ ಮನೆಗಳಿಗೆ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವಿ ಮಾಡಿದರು.
ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸುವ ಉದ್ದೇಶದಿಂದ ಈ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಾರ್ಯನಿರ್ವಾಹಕ ಅಧಿಕಾರಿಗಳು ಶೌಚಾಲಯ ನಿರ್ಮಾಣ, ಅದರ ಬಳಕೆ ಹಾಗೂ ಅದರಿಂದಾಗುವ ಆರೋಗ್ಯಕರ ಬೆಳವಣಿಗೆ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿದರು.
ಶೌಚಾಲಯ ನಿರ್ಮಾಣಕ್ಕೆ ಸಾಮಾನ್ಯ ಕುಟುಂಬಕ್ಕೆ 12 ಸಾವಿರ, ಎಸ್.ಸಿ.ಎಸ್.ಟಿ ಜನಾಂಗದವರಿಗೆ 15 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವುದರ ಜತೆಗೆ ಗ್ರಾಮವನ್ನು ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸಲು ಸಹಕಾರ ನೀಡುವಂತೆ ಮನವಿ ಸತೀಶ ನಾಯಕ ಮನವಿ ಮಾಡಿಕೊಂಡರು.
ಗ್ರಾಪಂ ಅಧ್ಯಕ್ಷೆ ರೇಣವ್ವ ಆಲೂರ, ತಾಪಂ ಸದಸ್ಯ ಹುಲಗಪ್ಪ ಪಾತ್ರೋಟ, ಗ್ರಾಪಂ ಸದಸ್ಯರಾದ ಸುರೇಶ ಕಿತ್ತೂರ, ಯಲ್ಲಪ್ಪ ಬೆಣ್ಣೂರ, ಅಕ್ಕಮಹಾದೇವಿ ಬಾಳಕ್ಕನವರ, ಭೀಮವ್ವ ಚಲವಾದಿ, ಗಂಗವ್ವ ಮಾದರ, ತಾಪಂ ಎಸ್.ಬಿ.ಎಂ ಸಂಯೋಜಕ ಶೇಖರ ಕಮತಗಿ, ಪಿಡಿಓ ಸವಿತಾ ನಂದೆಪ್ಪನವರ, ಕಾರ್ಯದರ್ಶಿ ವಾಯ್.ಪಿ.ಚಿತ್ತವಾಡಗಿ, ಸಿ.ಆರ್.ಪಿ ಕೊಳ್ಳಿ, ಶಿಕ್ಷಕರಾದ ಪಿ.ಆರ್. ಸನ್ನಪ್ಪನವರ, ಎಸ್.ಎಸ್.ಮನಗೂಳಿ, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.