ನವದೆಹಲಿ: ಕಳೆದ ಒಂದು ವರ್ಷದ ನರೇಂದ್ರ ಮೋದಿ ಸರ್ಕಾರದ ಆಡಳಿತವನ್ನು ಶ್ಲಾಘಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಆಡಳಿತ ಬಂಡವಾಳಶಾಹಿಯಿಂದ ಉದಾರ ನೀತಿಗೆ ಬದಲಾವಣೆಗೊಂಡಿದೆ ಎಂದರು.
ಶನಿವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭ್ರಷ್ಟಾಚಾರದಿಂದ ಆಡಳಿತ ಪಾರದರ್ಶಕತೆಗೆ ಬದಲಾಗಿದೆ, ಅನಿಶ್ಚಿತತೆಯ ಆಡಳಿತ ಖಚಿತತೆಗೆ ಬದಲಾಗಿದೆ’ ಎಂದರು.
‘ಬಿಜೆಪಿ ಭಾರತ ರಾಜಕಾರಣದ ಪ್ರಧಾನ ಕೇಂದ್ರವಾಗಿದೆ, ಬಿಹಾರ ಚುನಾವಣೆಯನ್ನು ಗೆಲ್ಲಲ್ಲೂ ಪ್ರಯತ್ನ ನಡೆದಿದೆ. ವಿರೋಧ ಪಕ್ಷಗಳು ನಮ್ಮ ವಿರುದ್ಧ ಹೋರಾಡಲು ಅನೈಸರ್ಗಿಕ ಮೈತ್ರಿಯನ್ನು ಮಾಡಿಕೊಂಡಿವೆ, ಆದರೆ ಬಿಹಾರದಲ್ಲಿ ಸರ್ಕಾರ ರಚಿಸುವುದು ನಾವೇ ಎಂಬ ಅಚಲ ವಿಶ್ವಾಸ ನಮಗಿದೆ’ ಎಂದರು.
ಭಾರತದ ಘನತೆ ಮತ್ತು ಪ್ರಭಾವ ಹೆಚ್ಚಾಗಿದೆ, ಪ್ರತಿಯೊಬ್ಬ ನಾಗರಿಕನಿಗೂ ಭದ್ರತೆ ದೊರೆಯುವಂತೆ ಮಾಡುವುದು ನಮ್ಮ ಕರ್ತವ್ಯ, ಕಳೆದ ದಶಕಕ್ಕಿಂದ ಹಣದುಬ್ಬರದ ಪ್ರಮಾಣದಲ್ಲೂ ಪ್ರಗತಿಯಾಗಿದೆ, ಎಲ್ಲಾ ರಾಜ್ಯಗಳಿಗೂ ಆರ್ಥಿಕ ಸ್ವಾಯತ್ತತೆ ನೀಡಿದ್ದೇವೆ ಎಂದು ಅವರು ತಿಳಿಸಿದರು.
ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ ಸರ್ಕಾರ ರಚಿಸಿದ್ದು ಒಂದು ಮಹತ್ವದ ಮೈಲಿಗಲ್ಲು, ಪ್ರತ್ಯೇಕವಾದವನ್ನು ಕಿತ್ತುಹಾಕಲು ನಾವು ಒಂದಾಗಿದ್ದೇವೆ ಎಂದರು.
ಅಲ್ಲದೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಜಯಲಲಿತಾ ಅವರಿಗೆ ಅವರು ಅಭಿನಂದನೆಗಳನ್ನು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.