ನವದೆಹಲಿ: ಉದ್ಯೋಗವನ್ನು ಬದಲಾವಣೆ ಮಾಡುತ್ತಿರುವವರು ಇನ್ನು ಮುಂದೆ ಪ್ರೊವಿಡೆಂಟ್ ಫಂಡ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಉದ್ಯೋಗ ಬದಲಾಯಿಸಿದಂತೆ ಪಿಎಫ್ ಕೂಡ ಅಟೋಮ್ಯಾಟಿಕ್ ಆಗಿ ಟ್ರಾನ್ಸ್ಫರ್ ಆಗಲಿದೆ.
ಸೆಪ್ಟಂಬರ್ ತಿಂಗಳಿನಿಂದ ಉದ್ಯೋಗಿಯ ಪ್ರಸ್ತುತ ಸಂಸ್ಥೆಯಲ್ಲಿನ ಪಿಎಫ್ ಆತ ಉದ್ಯೋಗ ಬದಲಾಯಿಸಿದಂತೆ ಆತನ ಹೊಸ ಸಂಸ್ಥೆಗೆ ಅಟೋಮ್ಯಾಟಿಕ್ ಆಗಿ ಟ್ರಾನ್ಸ್ಫರ್ ಆಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಎಫ್ ಕಮಿಷನರ್ ವಿ.ಪಿ.ಜಾಯ್ ಅವರು, ‘ನೋಂದಣಿಗೆ ಈಗ ಆಧಾರನ್ನು ನಾವು ಕಡ್ಡಾಯಗೊಳಿಸಿದ್ದೇವೆ. ಅಕೌಂಟ್ ಕ್ಲೋಸ್ ಮಾಡುವ ಅಗತ್ಯವಿಲ್ಲ. ಪಿಎಫ್ ಅಕೌಂಟ್ ಪರ್ಮನೆಂಟ್ ‘ಆಗಿದೆ.
ಉದ್ಯೋಗಿಗಳು ಅದೇ ಅಕೌಂಟ್ನ್ನು ಸಾಮಾಜಿಕ ಭದ್ರತೆಗಾಗಿ ಉಳಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.