ನವದೆಹಲಿ: ಗ್ರಾಮೀಣ ಭಾರತದ ಶೇ.62ರಷ್ಟು ಮನೆಗಳಲ್ಲಿ ಶೌಚಾಲಯವಿದ್ದು, ಇದನ್ನು ಶೇ.91ರಷ್ಟು ಮಂದಿ ನಿತ್ಯ ಬಳಕೆ ಮಾಡುತ್ತಿದ್ದಾರೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.
ಸ್ವಚ್ಛಭಾರತ ಅಭಿಯಾನ (ಗ್ರಾಮೀಣ) ಕಾರ್ಯಕ್ರಮದಡಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶನದಂತೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಈ ಸಮೀಕ್ಷೆಯನ್ನು ನಡೆಸಿದೆ.
ಮೇನಿಂದ ಜೂನ್ ವರೆಗೆ ಸಮೀಕ್ಷೆ ನಡೆಸಲಾಗಿದ್ದು, ಇದರ ಪ್ರಕಾರ ಈ ವರ್ಷದ ಜೂನ್ ತಿಂಗಳವರೆಗೆ ಗ್ರಾಮೀಣ ಭಾರತದ ಶೇ.62.45ರಷ್ಟು ಮನೆಗಳು ಶೌಚಾಲಯ ಹೊಂದಿವೆ. ಇದನ್ನು 91.29ರಷ್ಟು ಮಂದಿ ಬಳಸುತ್ತಿದ್ದಾರೆ.
ಥರ್ಡ್ ಪಾರ್ಟಿ ಸರ್ವೇ ಯೋಜನೆಯ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಈ ಸಮೀಕ್ಷೆಯನ್ನು ನಡೆಸಿದೆ. ಸಚಿವಾಲಯದ ಅಧಿಕೃತ ಸಮೀಕ್ಷೆಯ ಪ್ರಕಾರ ಶೇ.63.73ರಷ್ಟು ಗ್ರಾಮೀಣ ಮನೆಗಳಲ್ಲಿ ಶೌಚಾಲಯವಿದೆ. ಈ ಎರಡೂ ಸಮೀಕ್ಷೆಗಳ ಫಲಿತಾಂಶ ಹತ್ತಿರದಲ್ಲಿದೆ ಎಂದು ಸಚಿವ ಜಿತೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.