ನವದೆಹಲಿ: ಅಧಿಕಾರಿಗಳ ನೇಮಕ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ತಮಗೆ ಸಂವಿಧಾನದತ್ತ ಅಧಿಕಾರ ಇದೆ. ಇದನ್ನು ಪ್ರತಿಪಾದಿಸಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಈ ಮೂಲಕ ಕಳೆದ 4 ದಿನಗಳಿಂದ ದೆಹಲಿvಯಲ್ಲಿ ನಡೆದ ವರ್ಗಾವಣೆಗೆ ಸಂಬಧಪಟ್ಟಂತೆ ಕಳೆದ ನಾಲ್ಕು ದಿನಗಳಿಂದ ಹೊರಡಿಸಿದ್ದ ಆದೇಶಗಳನ್ನು ಲೆಫ್ಟಿನೆಂಟ್ ಗವರ್ನರ್ ರದ್ದು ಪಡಿಸಿದ್ದಾರೆ. ಅವರು ಅಧಿಕಾರಗಳ ವರ್ಗಾವಣೆಗೆ ಸಚಿವರ ಅನುಮೋದನೆ ಅಗತ್ಯವಿಲ್ಲ ಎಂದಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮತ್ತು ಅರವಿಂದ ಕೇಜ್ರಿವಾಲ್ ನಡುವೆ ವಿವಾದ ಭುಗಿಲ್ಲೆದ್ದಿತ್ತು. ಇದಕ್ಕಾಗಿ ಕೇಜ್ರಿವಾಲ್ ಅವರು ಕೇಂದ್ರ ಸರಕಾರ ಗವರ್ನರ್ ನಜೀಬ್ ಜಂಗ್ ಮೂಲಕ ಅಧಿಕಾರ ನಡೆಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.
ಅನಂತರ ವಿವಾದವು ರಾಷ್ಟ್ರಪತಿಗಳ ಅಗಂಳಕ್ಕೆ ಮುಟ್ಟಿದ್ದು ಈಗ ನಜೀಬ್ ಜಂಗ್ ಅವರ ಪತ್ರದ ಮೂಲಕ ಹೊಸ ತಿರುವು ಪಡೆಯುವ ಸಾಧ್ಯತೆಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.