ನವದೆಹಲಿ: 2018ರ ಜನವರಿ ೧ರಿಂದ ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲಿ ರೈಲ್ವೇ ಟಿಕೆಟ್ ಲಭ್ಯವಾಗಲಿದೆ.
ರೈಲು ಪ್ರಯಾಣಿಕರ ಸೌಲಭ್ಯದ ಕುರಿತಾಗಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರೈಲ್ವೇ ಟಿಕೆಟ್ ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಮಾತ್ರ ಇರುವುದರಿಂದ ಕೆಲವು ನಾಗರಿಕರಿಗೆ ಅದರಲ್ಲಿನ ಅಕ್ಷರಗಳನ್ನು ಓದುವುದು ಕಷ್ಟದಾಯವಾಗಿದೆ.
ಹೀಗಾಗೀ ಪ್ರಯಾಣಿಕರು ಟಿಕೆಟ್ನಲ್ಲಿನ ದರ, ಹೋಗಬೇಕಾಗಿರುವ ಸ್ಥಳ ಎಲ್ಲವನ್ನೂ ಸರಿಯಾಗಿ ತಿಳಿದುಕೊಳ್ಳುವಂತೆ ಮಾಡುವ ಸಲುವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಟಿಕೆಟ್ ಮುದ್ರಿಸಲಾಗುತ್ತಿದೆ.
ರೈಲು ನಿಲ್ದಾಣಗಳಲ್ಲಿ ಟಿಕೆಟ್ ಖರೀದಿ ಮಾಡುವವರಿಗೆ ಮಾತ್ರ ಇದು ಅನ್ವಯವಾಗಲಿದೆ. ಆನ್ಲೈನ್ನಲ್ಲಿ ಈ ಸೌಲಭ್ಯ ಇಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.