ನವದೆಹಲಿ: ಔಷಧಿ ದರ ನಿಯಂತ್ರಕ ನ್ಯಾಷನಲ್ ಫಾರ್ಮಸ್ಯುಟಿಕಲ್ ಫ್ರೈಸಿಂಗ್ ಅಥಾರಿಟಿ(ಎನ್ಪಿಪಿಎ) 761 ಔಷಧಿಗಳ ತಾತ್ಕಾಲಿಕ ಸೀಲಿಂಗ್ ದರಗಳನ್ನು ಘೋಷಿಸಿದೆ. ಕ್ಯಾನ್ಸರ್, ಎಚ್ಐವಿ, ಡಯಾಬಿಟಿಸ್, ಆಂಟಿಬಯೋಟಿಕ್ ಔಷಧಿಗಳನ್ನು ಇದು ಒಳಗೊಂಡಿದೆ.
ಜಿಎಸ್ಟಿಯು ಜುಲೈ 1ರಿಂದ ಅನುಷ್ಠಾನಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಕ್ಯಾನ್ಸರ್ ಸೇರಿದಂತೆ ಹಲವಾರು ಔಷಧಿಗಳ ದರಗಳು ಕಡಿಮೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ಪಿಪಿಎ ಮುಖ್ಯಸ್ಥ ಭುಪೇಂದ್ರ ಸಿಂಗ್, ‘ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನಕ್ಕೆ ಬರುತ್ತಿರುವುದರಿಂದ ಔಷಧಿಗಳ ದರ ಶೇ.2-3ರಷ್ಟು ಕಡಿಮೆ ಅಥವಾ ಹೆಚ್ಚು ಆಗಲಿದೆ’ ಎಂದಿದ್ದಾರೆ.
ಜಿಎಸ್ಟಿ ಅಧಿಸೂಚನೆಯ ಬಳಿಕ ಔಷಧಿಗಳ ಅಧಿಕೃತ ಪರಿಷ್ಕೃತ ಸೀಲಿಂಗ್ ದರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.