ಖರಗ್ಪುರ: ಮಳೆ, ಹೊಗೆ ಅಥವಾ ಮಂಜುಗಳಿಂದ ಉಂಟಾಗುವ ಮುಸುಕಿನ ವಾತಾವರಣಗಳಿಂದ ರೈಲು, ವಿಮಾನಗಳು ವಿಳಂಬವಾಗುವುದನ್ನು ತಪ್ಪಿಸುವ ಸಲುವಾಗಿ ಐಐಟಿ ಖರಗ್ಪುರ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ.
ಈ ತಂತ್ರಜ್ಞಾನವನ್ನು ಐಐಟಿ ‘ರಿಯಲ್ ಟೈಮ್ ಫಾಗ್ ರಿಮೂವಲ್ ಫ್ರಂ ವಿಡಿಯೋಸ್ ಆಂಡ್ ರಿಯಲ್ ಟೈಂ ರೈನ್ ರಿಮೂವಲ್ ಫ್ರಂ ವಿಡಿಯೋಸ್’ ಎಂದು ಕರೆದಿದೆ.
ಈ ತಂತ್ರಜ್ಞಾನಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದ್ದು, ರೈಲ್ವೇ ಮತ್ತು ಡಿಆರ್ಡಿಓ ಈಗಾಗಲೇ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಐಐಟಿಯೊಂದಿಗೆ ಮಾತುಕತೆ ನಡೆಸುತ್ತಿದೆ.
ಈ ಫಾಗ್ ಅಲ್ಗೋರಿದಂ ಆಬ್ಜೆಕ್ಟ್ಗಳ ದೂರವನ್ನು ಡೆಪ್ತ್ ಮ್ಯಾಪ್ ಮಾದರಿಯಲ್ಲಿ ಕ್ಯಾಮೆರಾ ಮೂಲಕ ತೋರಿಸುತ್ತದೆ. ಅನಿಸೋಟ್ರೋಫಿಕ್ ಪ್ರಸರಣದ ಮೂಲಕ ಈ ಡೆಪ್ತ್ ಮ್ಯಾಪ್ನ್ನು ಸರಳಗೊಳಿಸಿ ಆಜ್ಬೆಕ್ಟ್ಗಳ ಕ್ಲಿಯರ್ ಬೌಂಡರಿಗಳನ್ನು ಪತ್ತೆ ಮಾಡಲಾಗುತ್ತದೆ. ಇದು ಕ್ಲೀನ್ ಇಮೇಜ್ಗಳನ್ನು ನೀಡುತ್ತದೆ. ಈ ಮೂಲಕ ಈ ತಂತ್ರಜ್ಞಾನ ಕಾರ್ಯ ಮಾಡುತ್ತದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.