ವಾಷಿಂಗ್ಟನ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್ನ ವೈಟ್ ಹೌಸ್ನಲ್ಲಿ ಭೇಟಿಯಾಗಿದ್ದು ಹಲವಾರು ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರಿಗೆ ಭಾರತಕ್ಕೆ ಆಗಮಿಸುವಂತೆ ಆಹ್ವಾನವನ್ನು ನೀಡಿದ್ದು, ಈ ಆಹ್ವಾನವನ್ನು ಸ್ವೀಕರಿಸಿದ ಟ್ರಂಪ್ ಭಾರತಕ್ಕೆ ಆಗಮಿಸುವುದಾಗಿ ಹೇಳಿದ್ದಾರೆ.
ವೈಟ್ ಹೌಸ್ನ ರೋಸ್ ಗಾರ್ಡನ್ನಲ್ಲಿ ಉಭಯ ಮುಖಂಡರು ಜಂಟಿ ಹೇಳಿಕೆಯನ್ನು ನೀಡಿದ್ದು ಈ ವೇಳೆ ಮೋದಿ, ಟ್ರಂಪ್ ಮತ್ತು ಅವರ ಕುಟುಂಬವನ್ನು ಭಾರತಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.
ಟ್ರಂಪ್ ಪುತ್ರಿ ಇವಾಂಕಾ ಅವರನ್ನು ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಜಾಗತಿಕ ಉದ್ಯಮಶೀಲ ಶೃಂಗಸಭೆಗೆ ಆಗಮಿಸುವಂತೆ ಪ್ರತ್ಯೇಕವಾಗಿ ಆಹ್ವಾನಿಸಿದ್ದಾರೆ. ಮೋದಿ ಆಹ್ವಾನಕ್ಕೆ ಇವಾಂಕಾ ಧನ್ಯವಾದ ತಿಳಿಸಿದ್ದಾರೆ.
ವೈಟ್ಹೌಸ್ಗೆ ಬಂದ ಮೋದಿಯನ್ನು ಟ್ರಂಪ್ ಮತ್ತು ಅಮೇರಿಕಾದ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಭವ್ಯ ಸ್ವಾಗತವನ್ನು ಕೋರಿದರು.
ಇದು ಮೋದಿ ಮತ್ತು ಟ್ರಂಪ್ನ ಮೊದಲ ನೇರ ಭೇಟಿಯಾಗಿದೆ. ಅಲ್ಲದೆ ವೈಟ್ ಹೌಸ್ನಲ್ಲಿ ಟ್ರಂಪ್ ಔತಣಕೂಟ ಆಯೋಜಿಸಿದ ವಿಶ್ವದ ಮೊದಲ ನಾಯಕ ಮೋದಿಯಾಗಿದ್ದಾರೆ.
ಜಂಟಿ ಹೇಳಿಕೆಯ ಸಂದರ್ಭ ಯುಎಸ್ಗೆ ಆಗಮಿಸಿದ ಮೋದಿಯವರಿಗೆ ಟ್ರಂಪ್ ಧನ್ಯವಾದಗಳನ್ನು ತಿಳಿಸಿದ್ದು, ಫಲಪ್ರದ ಸಂವಾದದಿಂದ ಸಂತುಷ್ಟಗೊಂಡಿರುವುದಾಗಿ ಹೇಳಿದ್ದಾರೆ.
ನನ್ನ ಚುನಾವಣಾ ಪ್ರಚಾರದ ವೇಳೆ ಒಂದು ವೇಳೆ ನಾನು ಗೆದ್ದರೆ ವೈಟ್ ಹೌಸ್ನಲ್ಲಿ ಭಾರತ ನನ್ನ ನಿಜವಾದ ಸ್ನೇಹಿತನಾಗಲಿದೆ ಎಂದು ಹೇಳಿದ್ದೆ. ಇದೀಗ ಅದು ಸತ್ಯವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರುತ್ತಿರುವ ಮೋದಿಯ ಪ್ರಯತ್ನವನ್ನು ಟ್ರಂಪ್ ಶ್ಲಾಘಿಸಿದ್ದಾರೆ.
ಇನ್ನೊಂದೆಡೆ ಮೋದಿ ಟ್ರಂಪ್ ಅವರ ಸ್ನೇಹಪೂರ್ವ ಸ್ವಾಗತಕ್ಕೆ ಸಂತೋಷಗೊಂಡಿರುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.