ನವದೆಹಲಿ : ಉತ್ತಮ ರಾಜಕಾರಣಿಯಾಗಲು ಬಯಸುವವರಿಗಾಗಿ ತರಬೇತಿ ಕೋರ್ಸ್ಗಳು ಶೀಘ್ರದಲ್ಲೇ ಆರಂಭವಾಗಲಿದೆ.
ರಾಂಬಹು ಮಾಳಗಿ ಪ್ರಬೋಧಿನಿ (RMP) ಎಂಬ ಶಿಕ್ಷಣ ಸಂಸ್ಥೆ ಪ್ರಭಾವಿ ರಾಜಕೀಯ ನಾಯಕರನ್ನು ರೂಪಿಸಲು ತರಬೇತಿ ಕೋರ್ಸ್ಗಳನ್ನು ಪ್ರಾರಂಭಿಸಲಿದೆ.
ಈ ತರಬೇತಿಯು 9 ತಿಂಗಳ ವಸತಿ ಕೋರ್ಸ್ ಆಗಿದ್ದು, ಇದರಲ್ಲಿ ರಾಜಕೀಯ, ಪತ್ರಿಕೋದ್ಯಮ, ಪ್ರಭಾವಿ ನಾಯಕತ್ವ ಮತ್ತು ಉತ್ತಮ ಆಡಳಿತದ ಬಗ್ಗೆ ತರಬೇತಿ ನೀಡಲಾಗುತ್ತದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಟಾನ್ನಲ್ಲಿ ಈ ಕೋರ್ಸ್ ಆಗಸ್ಟ್ 1 ರಿಂದ ಪ್ರಾರಂಭವಾಗಲಿದೆ. ಜೂನ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಮೊದಲ ಬ್ಯಾಚ್ನಲ್ಲಿ 40 ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುತ್ತದೆ. ಕನಿಷ್ಠ ವಿದ್ಯಾರ್ಹತೆ ಎಂದರೆ ಪದವಿ ತೇರ್ಗಡೆಯಾಗಿರಬೇಕು. 9 ತಿಂಗಳ ಕೋರ್ಸ್ ಇದಾಗಿದ್ದು, ಹಾಸ್ಟೆಲ್, ವಸತಿ, ಊಟ ಎಲ್ಲವೂ ಸೇರಿ ಒಟ್ಟು 2.5 ಲಕ್ಷ ರೂ. ನೀಡಬೇಕಾಗುತ್ತದೆ.
ಕೇವಲ ರಾಜಕಾರಣಿಗಳಷ್ಟೇ ಅಲ್ಲದೆ, ನಾಗರಿಕ ಸೇವಾ ಅಧಿಕಾರಿ, ಪತ್ರಕರ್ತರಾಗಲು ಇಚ್ಛಿಸುವವರೂ ಸಹ ಈ ತರಬೇತಿಯನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಆಡಳಿತಾಧಿಕಾರಿ ಹೇಳಿದ್ದಾರೆ.
ತರಬೇತಿ ಮುಗಿಸಿದ ಬಳಿಕ ವಿದ್ಯಾರ್ಥಿಗಳು ಯಾವ ಪಕ್ಷಕ್ಕೆ ಬೇಕಾದರೂ ಸೇರಿಕೊಳ್ಳಬಹುದು. ಉತ್ತಮ ರಾಜಕಾರಣಿಗಳನ್ನು ರೂಪಿಸಬೇಕೆಂಬುದೇ ಸಂಸ್ಥೆಯ ಉದ್ದೇಶ ಎಂದು ಆರ್ಎಂಪಿ ಉಪಾಧ್ಯಕ್ಷರಾಗಿರುವ ವಿನಯ್ ಸಹಸ್ರಬುದ್ಧೆ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.