ಪಾಟ್ನಾ: ಆರ್ಜೆಡಿ ಪಕ್ಷದ ಮಾಜಿ ನಾಯಕ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ‘ಜನ್ ಕ್ರಾಂತಿ ಅಧಿಕಾರ್ ಮೋರ್ಚಾ’ ಎಂಬ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಬಿಹಾರಕ್ಕೆ 3ನೇ ಆಯ್ಕೆಯ ಅಗತ್ಯವಿದೆ, ಅದಕ್ಕಾಗಿ ಹೊಸ ಪಕ್ಷ ಸ್ಥಾಪಿಸುತ್ತಿದ್ದೇವೆ. ಚುನಾವಣೆಗೆ ಏಕಾಂಗಿಯಾಗಿ ಹೋಗಬೇಕೋ ಅಥವಾ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೋ ಎಂಬುದನ್ನು ಮುಂಬರುವ ದಿನಗಳಲ್ಲಿ ನಿರ್ಧರಿಸುತ್ತೇವೆ’ ಎಂದಿದ್ದಾರೆ.
‘ಸಮಾಜದಲ್ಲಿರುವ ಎಲ್ಲಾ ಕೆಟ್ಟದರ ವಿರುದ್ಧ ನನ್ನ ಪಕ್ಷ ಹೋರಾಡುತ್ತದೆ, ಜನವಿರೋಧಿ ನೀತಿ ವಿರುದ್ಧ ಹೋರಾಡಲಿದೆ, ಅಭಿವೃದ್ಧಿಗಾಗಿ ಕ್ರಾಂತಿಯನ್ನು ಹುಟ್ಟು ಹಾಕುತ್ತೇವೆ’ ಎಂದಿದ್ದಾರೆ.
ಸೆಪ್ಟಂಬರ್ ಬಳಿಕ ಬಿಹಾರದಲ್ಲಿ ಚುನಾವಣೆ ನಡೆಯಲಿದೆ, ಆರ್ಜೆಡಿಯಿಂದ ಹೊರ ಬಂದು ಹೊಸ ಪಕ್ಷ ಕಟ್ಟಿರುವ ಪಪ್ಪು ಅವರು ಈ ಚುನಾವಣೆಯಲ್ಲಿ ಯಾವ ರೀತಿಯ ಮ್ಯಾಜಿಕ್ ಮಾಡುತ್ತಾರೆ ಎಂದು ಕಾದು ನೋಡಬೇಕಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.