ನವದೆಹಲಿ: ಚಿಲಿಕ ಸರೋವರನ್ನು ವಿಶ್ವ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವ ಯುನೆಸ್ಕೋದ ಯೋಜನೆಯನ್ನು ಬೆಂಬಲಿಸುವಂತೆ ಒರಿಸ್ಸಾ ಸರ್ಕಾರಕ್ಕೆ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಅವರಿಗೆ ಪತ್ರ ಬರೆದಿರುವ ಪ್ರಧಾನ್, ‘ಯುನೆಸ್ಕೋವು ಒಎನ್ಜಿಸಿ ಸಹಕಾರದೊಂದಿಗೆ ಚಿಲಿಕ ಸರೋವರವನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ, ಇದರಿಂದಾಗಿ ಸ್ಥಿರ ಅಭಿವೃದ್ಧಿಗೆ ಪೂರಕವಾದ ಸಂರಕ್ಷಣೆಯ ಬ್ರ್ಯಾಂಡ್ ಆಗಿ ಈ ಸರೋವರದ ಮೌಲ್ಯ ಹೆಚ್ಚಾಗಲಿದೆ’ ಎಂದಿದ್ದಾರೆ.
ಚಿಲಿಕ ದೇಶದ ಅತೀದೊಡ್ಡ ಕರಾವಳಿ ಆವೃತ್ತವಾಗಿತ್ತು, ಇಲ್ಲಿನ ಪರಿಸರವನ್ನು ಸಂರಕ್ಷಿಸುವ ಅಗತ್ಯವಿದೆ. ಈ ಬಗ್ಗೆ ಯುನೆಸ್ಕೋ ನಿರ್ದೇಶಕ ಶಿಗೆರು ಅಯಗಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಸರೋವರ, ಪ್ರಾಣಿಗಳನ್ನು, ಹಕ್ಕಿಗಳ, ಮೀನುಗಾರ ಸಮುದಾಯಗಳ ಸಂರಕ್ಷಣೆಗೆ ಯುನೆಸ್ಕೋ ಮತ್ತು ಒಎನ್ಜಿಸಿ ಕಡಿಮೆ ಮತ್ತು ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.