ಕೊಲ್ಕತ್ತಾ: ಖರಗ್ಪುರದ ತಜ್ಞರ ತಂಡವೊಂದು ರೇಷ್ಮೆಯಿಂದ ಧರಿಸಬಹುದಾದ ಎಲೆಕ್ಟ್ರಾನಿಕ್ ಡಿವೈಸ್ ದೇಶೀಯವಾಗಿ ಅಭಿವೃದ್ಧಿಪಡಿಸಿದೆ.
ಸಿಲ್ಕ್ ಪೈಬ್ರಾಯಿನ್ ಎಂದು ಕರೆಯಲ್ಪಡುವ ಸಿಲ್ಕ್ ಪ್ರೊಟೀನ್ ಆಧಾರಿತ ಹೈಬ್ರಿಡ್ ಮೆಟೀರಿಯಲ್ ಮೂಲಕ ತಂತ್ರಜ್ಞಾನವನ್ನು ಬಳಸಿ ಎಲೆಕ್ಟ್ರಾನಿಕ್ ಡಿವೈಸ್ ಅಭಿವೃದ್ಧಿಪಡಿಸಲಾಗಿದೆ.
ಸ್ಪಾನ್ ಪ್ರೊಟೋಟೈಪ್ ಟೆಕ್ಸ್ಟೈಲ್ ಆಧಾರಿತ ಸ್ಮಾರ್ಟ್ ಎಲೆಕ್ಟ್ರಾನಿಕ್ ಡಿವೈಸ್ ಇದಾಗಿದ್ದು ಯೋಧರಿಗೆ, ಇತರ ರಕ್ಷಣಾ ಸಿಬ್ಬಂದಿಗಳಿಗೆ ಮತ್ತು ಬಯೋ ಮೆಡಿಕಲ್ ಅಪ್ಲಿಕೇಶನ್ನಲ್ಲಿರುವವರಿಗೆ ಧರಿಸಲು ಅತ್ಯಂತ ಪೂರಕವಾಗಿದೆ.
ಈ ಹೈಬ್ರಿಡ್ ಫೋಟೋ ಡಿಟೆಕ್ಟರ್ ಅನ್ನು ಬಂಗಾರದ ಮೇಲಿನ ಜಿಂಕ್ ಆಕ್ಸೈಡ್ ನ್ಯಾನೋ ಸ್ಟ್ರಕ್ಚರ್ನ್ನು ಬಳಕೆ ಮಾಡಿ ವಿನ್ಯಾಸಗೊಳಿಸಲಾಗಿದೆ, ಎಲೆಕ್ಟ್ರಾನಿಕ್ಸ್ ಮತ್ತು ಲೈಟನ್ನು ಸಂಯೋಜನೆಗೊಳಿಸಲು ಎಂಬಿಡೆಡ್ ಸಿಲ್ಕ್ ಪ್ರೊಟೀನ್ನನ್ನು ಅಪ್ಲಿಕೇಶನ್ಗೆ ಬಳಕೆ ಮಾಡಲಾಗಿದೆ ಎಂದು ಈ ತಂಡದ ಮುಖ್ಯಸ್ಥ ಸಮಿತ್ ಕೆ ರಾಯ್ ಅವರು ಹೇಳಿದ್ದಾರೆ.
ಲೈಟ್ ಸಿಗ್ನಲ್ಗಳನ್ನು ವೋಲ್ಟೇಜ್ ಅಥವಾ ಕರೆಂಟ್ಗಳಾಗಿ ಪರಿವರ್ತಿಸುವ ಮೂಲಕ ಈ ಫೋಟೋ ಡಿಟೆಕ್ಟರ್ ಆಪರೇಟ್ ಆಗುತ್ತದೆ. ಈ ಹೈಬ್ರಿಡ್ ಮೆಟೀರಿಯಲ್ ಡಾಟಾಗಳನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ. ಅಲ್ಟ್ರಾವೈಲೆಟ್ ಮತ್ತು ವಿಸಿಬಲ್ ವೇವ್ಲೆನ್ತ್ ರೇಂಜ್ ಎರಡರಲ್ಲೂ ಲೈಟನ್ನು ಡಿಟೆಕ್ಟ್ ಮಾಡುತ್ತದೆ.
ಈ ಮೂಲಕ ಪತ್ತೆಹಚ್ಚುವಿಕೆಗೆ ಹೆಚ್ಚಿನ ಸಂವೇದನಾಶೀಲತೆ ಮತ್ತು ಪ್ರಾಮುಖ್ಯತೆಯನ್ನು ನೀಡುತ್ತದೆ.
ಈ ತಂತ್ರಜ್ಞಾನದಿಂದಾಗಿ ಭಾರತದ ಟೆಕ್ಸ್ಟೈಲ್ ತುಂಬಾ ಸ್ಮಾರ್ಟ್ ಆಗಲಿದ್ದು, ಡಾಟಾಗಳನ್ನು ಸಂಗ್ರಹಿಸುವ, ಅಗತ್ಯ ಕ್ರಮಗಳಿಗೆ ಪ್ರತಿಕ್ರಿಯಿಸುವ ಅತ್ಯುನ್ನತ ತಂತ್ರಜ್ಞಾನಗಳನ್ನು ಒಳಗೊಳ್ಳಲಿದೆ.
ಈ ಮಹತ್ವದ ಸಾಧನೆ ಮಾಡಿದ ವಿಜ್ಞಾನಿಗಳಿಗೆ ನಾವು ಧನ್ಯವಾದ ಹೇಳಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.