ಮುಂಬಯಿ: ಮುಂಬಯಿಯಿಂದ ಶಿರಡಿಗೆ ವಿಮಾನದ ಮೂಲಕ ಕೇವಲ 40 ನಿಮಿಷದಲ್ಲಿ ಇನ್ನು ಮುಂದೆ ಪ್ರಯಾಣಿಸಬಹುದಾಗಿದೆ. ಜುಲೈ ತಿಂಗಳ ಅಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದ ಅಹ್ಮದಾನಗರದ ದೇಗುಲ ನಗರಿಯಲ್ಲಿ ವಿಮಾನನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ವರದಿಗಳ ಪ್ರಕಾರ ಈ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಮುಂಬಯಿ ಮತ್ತು ಶಿರಡಿಯ ನಡುವಣ ಪ್ರಯಾಣ ಕೇವಲ 40 ನಿಮಿಷದ್ದಾಗಿರುತ್ತದೆ.
ಮುಂಬಯಿ ಮತ್ತು ಶಿರಡಿ ನಡುವೆ 235 ಕಿ.ಮೀ ಅಂತರವಿದ್ದು, ರಸ್ತೆ ಮಾರ್ಗವಾಗಿ ತಲುಪಲು 5 ಗಂಟೆಗಳು ತಗುಲಲಿದೆ.
ಇದೀಗ ನಿರ್ಮಾಣವಾಗುತ್ತಿರುವ ವಿಮಾನನಿಲ್ದಾಣಗಳಿಂದಾಗಿ ದೇಶ ಮತ್ತು ವಿದೇಶಗಳ ಸಾಯಿಬಾಬಾ ಭಕ್ತರಿಗೆ ಕಡಿಮೆ ಅವಧಿಯಲ್ಲಿ ಶಿರಡಿಯನ್ನು ಬಂದು ತಲುಪಬಹುದಾಗಿದೆ.
ಸಾಯಿಬಾಬಾ ಸಂಸ್ತಾನ ಟ್ರಸ್ಟ್ ಈ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.