ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರವು ನಗರ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 4.31 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಇದು ಯುಪಿಎ ಸರ್ಕಾರ 2004 ಮತ್ತು 2014ರ ನಡುವೆ ಬಿಡುಗಡೆ ಮಾಡಿದೆ 1.18 ಲಕ್ಷ ಕೋಟಿ ಮೊತ್ತಕ್ಕಿಂತ ಶೇ.250ರಷ್ಟು ಹೆಚ್ಚು ಎಂದಿದ್ದಾರೆ.
ಅಲ್ಲದೇ 2014 ಮತ್ತು 2017ರ ನಡುವೆ 5 ವರ್ಷಗಳ ಹೊಸ ನಗರ ಯೋಜನೆಯ ಅವಧಿಗೆ ರೂ.15, 475 ಕೋಟಿ ತಲಾ ಆದಾಯ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಅದರ ಹಿಂದಿನ ಹತ್ತು ವರ್ಷಗಳಲ್ಲಿ ಇದರ ಮೊತ್ತ ಕೇವಲ ರೂ. 4, 918ಆಗಿತ್ತು ಎಂದರು.
ಕಳೆದ ಮೂರು ವರ್ಷಗಳಲ್ಲಿ ಹೂಡಿಕೆಯಲ್ಲಿ, ತಲಾ ಆದಾಯ ವ್ಯಯದಲ್ಲಿ, ಸೆಂಟ್ರಲ್ ಅಸಿಸ್ಟೆಂಟೆನ್ಸ್ನಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ, ಇದು ದೇಶದ ಅತೀ ಅಗತ್ಯದ ನಗರ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.