ಪೂಂಚ್: ಗಡಿಯಲ್ಲಿ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಯನ್ನು ಖಂಡಿಸಿರುವ ಪಾಕಿಸ್ಥಾನದ ಪ್ರಜೆಗಳು, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯನ್ನು ಬಯಸುವುದಾಗಿ ತಿಳಿಸಿದ್ದಾರೆ.
‘ಇದು ಪವಿತ್ರ ರಂಜಾನ್ ತಿಂಗಳು. ಉಭಯ ದೇಶಗಳು ಪೈರಿಂಗ್ ನಿಲ್ಲಿಸಿ, ಒಂದಾಗಬೇಕು. ಎರಡೂ ದೇಶಗಳ ನಡುವೆ ಒಗ್ಗಟ್ಟು ಮತ್ತು ಶಾಂತಿಯನ್ನು ಮರು ಸ್ಥಾಪಿಸುವುದು ಅತ್ಯಗತ್ಯ’ ಎಂದು ಇಸ್ಲಾಮಾಬಾದ್ನಿಂದ ಭಾರತಕ್ಕೆ ಸಂಬಂಧಿಯನ್ನು ನೋಡಲು ಬಂದಿರುವ ಝೆಹ್ರಾ ಪರ್ವೀನ್ ಹೇಳಿದ್ದಾರೆ.
‘ನಿರಂತರ ಫೈರಿಂಗ್ ಉಭಯ ದೇಶಗಳ ಗಡಿಯಲ್ಲೂ ಅಪಾರ ಪ್ರಾಣಿ ಹಾನಿಯುಂಟು ಮಾಡುತ್ತಿದೆ. ಹೀಗಾಗೀ ಉಭಯ ಸರ್ಕಾರಗಳು ಒಮ್ಮತಕ್ಕೆ ಬಂದು, ಫೈರಿಂಗ್ಗೆ ಅಂತ್ಯ ಹಾಡಬೇಕು’ ಎಂದು ಮತ್ತೋರ್ವ ಪಾಕಿಸ್ಥಾನಿ ಪ್ರಜೆ ನಬೀಲ್ ಅಹ್ಮದ್ ತಿಳಿಸಿದ್ದಾರೆ.
ಪಾಕಿಸ್ಥಾನದ ಸೇನೆ ಶನಿವಾರ ಗಡಿಯ ಕೃಷ್ಣ ಘಾಟಿ ಸೆಕ್ಟರ್ ಸಮೀಪ ಸಣ್ಣ ಶಸ್ತ್ರಾಸ್ತ್ರ, ಟೋಮ್ಯಾಟಿಕ್ ಮೆಶಿನ್, ಮೋರ್ಟಾರ್ಗಳ ಮೂಲಕ ದಾಳಿ ನಡೆಸಿದ್ದು, ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.