ಲಕ್ನೋ: ಪ್ರಧಾನಿಯವರ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಪೂರಕವಾಗಿ ಉತ್ತರಪ್ರದೇಶ ಸರ್ಕಾರ ‘ಮೇಕ್ ಇನ್ ಯುಪಿ’ ಇಲಾಖೆಯನ್ನು ರಚಿಸಲು ಮುಂದಾಗಿದೆ.
ಈಗಾಗಲೇ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು, ‘ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗ ಉತ್ತೇಜನ ನಿಯಮ 2017’ ಕರಡಿಗೆ ಅನುಮೋದನೆಯನ್ನು ನೀಡಿದ್ದಾರೆ. ಇದರಡಿಯಲ್ಲಿ ‘ಮೇಕ್ ಇನ್ ಯುಪಿ’ ಇಲಾಖೆಗಳ ರಚನೆ ಮಾಡಲಾಗುತ್ತಿದೆ.
ತನ್ನ ರಾಜ್ಯದಲ್ಲಿನ ಕೈಗಾರಿಕೆಗಳಿಗೆ ಬಂಡವಾಳ ಹರಿದು ಬರುವಂತೆ ಮಾಡಲು ಮತ್ತು ಉತ್ಪಾದನಾ ವಲಯಗಳನ್ನು ಸ್ಥಾಪಿಸಲು ಈ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಸರ್ಕಾರ ಕರಡು ನೀತಿಯನ್ನೂ ಪ್ರಸ್ತಾಪ ಮಾಡಿದ್ದು, ಸಿಎಂ ನೇತೃತ್ವದಲ್ಲಿ, ರಾಜ್ಯ ಮುಖ್ಯ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ರಾಜ್ಯ ಹೂಡಿಕೆ ಉತ್ತೇಜನಾ ಮಂಡಳಿ ಸ್ಥಾಪನೆಗಾಗಿ ಇದು ಮುಂದಿನ ಮೂರು ತಿಂಗಳುಗಳಲ್ಲಿ ಲಭ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.