ಮಂಗಳೂರು: ಬೇಸಿಗೆ ಸಮಯದಲ್ಲಿ ಮಂಗಳೂರು ನಗರ ಎದುರಿಸುವ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸುವುದಕ್ಕಾಗಿ ಡಸಲಿನೇಶನ್ ಪ್ಲಾಂಟ್(ಸಮುದ್ರ ನೀರನ್ನು ಶುದ್ಧೀಕರಿಸುವ ಘಟಕ)ವೊಂದನ್ನು ಇಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಮೈಸೂರಿನಲ್ಲಿ ಗುರುವಾರ ಮಾಹಿತಿ ನೀಡಿರುವ ರಾಜ್ಯ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್, ‘ಸುಮಾರು 1500 ಕೋಟಿ ವೆಚ್ಚದಲ್ಲಿ ಮಂಗಳೂರಿನಲ್ಲಿ ಡಸಲಿನೇಶನ್ ಪ್ಲಾಂಟ್ ಸ್ಥಾಪಿಸಲು ಉದ್ದೇಶಿಸಿಲಾಗಿದೆ’ ಎಂದು ಹೇಳಿದ್ದಾರೆ.
ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿನಿತ್ಯ 200 MLD ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಇದಕ್ಕೆ ಇರಲಿದೆ ಎಂದಿದ್ದಾರೆ.
ಸಿಂಗಾಪುರ, ದುಬೈ ಸೇರಿದಂತೆ ಜಗತ್ತಿನ ಬಹುತೇಕ ನಗರಗಳು, ಅದರಲ್ಲೂ ಮುಖ್ಯವಾಗಿ ಗಲ್ಫ್ ಪ್ರದೇಶಗಳು ಡಸಲಿನೇಶನ್ ಬಳಿಕ ಕುಡಿಯುವ ನೀರು ಪಡೆಯುತ್ತವೆ.
ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಅದರಲ್ಲಿನ ಉಪ್ಪನ್ನು ಸಂಪೂರ್ಣ ತೆಗೆದು ಬಳಿಕ ಅದನ್ನು ಕುಡಿಯಲು ಯೋಗ್ಯಗೊಳಿಸುವುದೇ ಡಸಲಿನೇಶನ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.