ನವದೆಹಲಿ: ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ, ಸರ್ಕಾರದ ಸಾಧನೆಯನ್ನು ಬಿಂಬಿಸುವ ಎರಡು ಸ್ಲೋಗನ್ಗಳನ್ನು ಬಿಡುಗಡೆ ಮಾಡಲಾಗಿದೆ.
‘ವರ್ಷ್ ಏಕ್ ಕಾಮ್ ಅನೇಕ್’ ಮತ್ತು ‘ಮೋದಿ ಸರ್ಕಾರ್ ಕಾಮ್ ಲಗಾತಾರ್’ ಎಂಬ ಎರಡು ಆಕರ್ಷಕ ಸ್ಲೋಗನ್ಗಳನ್ನು ಬಿಡುಗಡೆ ಮಾಡಲಾಗಿದೆ.
ಸರ್ಕಾರದ ವರ್ಷಾಚರಣೆಯನ್ನು ಬಿಜೆಪಿ ಮತ್ತು ಸರ್ಕಾರ ‘ಜನ ಕಲ್ಯಾಣ್ ಪರ್ವ’ವಾಗಿ ಒಂದು ವಾರಗಳ ಕಾಲ ಸಂಭ್ರಮಿಸಲಿದ್ದು, ಮೇ25ರಿಂದ 31ರವರೆಗೆ ದೇಶದ ವಿವಿಧೆಡೆ 250 ಸಮಾವೇಶಗಳನ್ನು ನಡೆಸಲಿದೆ.
ಜನ ಸಂಘ ನಾಯಕ ದೀನ್ ದಯಾಳ್ ಉಪಾಧ್ಯಾಯ ಅವರ ತವರು ಮಥುರಾದ ನಗ್ಲಾ ಚಂದ್ರಭನ್ನಲ್ಲಿ ಮೇ.25ರಂದು ಮೊದಲ ಸಮಾವೇಶ ನಡೆಯಲಿದೆ. ಮೋದಿ ಇದನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಒಟ್ಟಿನಲ್ಲಿ ತನ್ನ ವರ್ಷಾಚರಣೆಯನ್ನು ಎನ್ಡಿಎ ಸರ್ಕಾರ ಮತ್ತು ಬಿಜೆಪಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಸಮಾವೇಶಗಳನ್ನು ಆಯೋಜಿಸುವ ಮೂಲಕ ತನ್ನ ಯೋಜನೆಗಳ ಬಗ್ಗೆ ಜನರಿಗೆ ಅರಿವನ್ನೂ ಮೂಡಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.