ಮ್ಯಾಡ್ರಿಡ್: ಸ್ಪೇನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಆ ದೇಶದೊಂದಿಗೆ ಒಟ್ಟು 7 ಒಪ್ಪಂದಗಳಿಗೆ ಸಹಿ ಹಾಕಿದರು.
ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ ಮತ್ತು ಸ್ಪೇನ್ ಪ್ರಧಾನಿ ಮರಿಯಾನೋ ರಜೋಯಿ ಅವರು ವಿವಿಧ ವಲಯಗಳಿಗೆ ಸಂಬಂಧಿಸಿದ ಒಟ್ಟು 7 ಮಹತ್ವದ ಒಪ್ಪಂದಗಳಿಗೆ ಪರಸ್ಪರ ಸಹಿ ಹಾಕಿದರು.
ಶಿಕ್ಷೆಗೊಳಗಾದ ವ್ಯಕ್ತಿಗಳ ವರ್ಗಾವಣೆ, ಅಂಗಾಂಗ ಮರುಜೋಡನೆ, ಸೈಬರ್ ಭದ್ರತೆಯಲ್ಲಿ ಸಹಕಾರ, ನಾಗರಿಕ ವಿಮಾನಯಾನದಲ್ಲಿ ತಾಂತ್ರಿಕ ಸಹಕಾರ, ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ವಿನಾಯಿತಿ, ವಿದೇಶ ಸೇವಾ ಸಂಸ್ಥೆ ಮತ್ತು ಸ್ಪೇನ್ನ ಡಿಪ್ಲೋಮ್ಯಾಟಿಕ್ ಅಕಾಡಮಿ ನಡುವೆ ಸಹಕಾರ, ನವೀಕರಿಸಬಹುದಾದ ಇಂಧನದಲ್ಲಿ ಸಹಕಾರದ ಒಪ್ಪಂದಗಳು ಉಭಯ ದೇಶಗಳ ನಡುವೆ ಏರ್ಪಟ್ಟಿದೆ.
ಸಾಕಷ್ಟು ಕೌಶಲ್ಯ ಮತ್ತು ಪಾಂಡಿತ್ಯವನ್ನು ಹೊಂದಿರುವ ಸ್ಪೇನ್ನೊಂದಿಗೆ ರೈಲ್ವೇ ವಿಸ್ತರಣೆ ಮತ್ತು ಉನ್ನತೀಕರಣ, ಸ್ಮಾರ್ಟ್ಸಿಟಿ, ಮೂಲಸೌಕರ್ಯ ಮುಂತಾದ ವಲಯಗಳಲ್ಲಿ ಸಹಕಾರ ಪಡೆಯಲು ಬಯಸುವುದಾಗಿ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.